ಮಹಿಳೆಯರಿಗೆ ಬಂಪರ್ ಯೋಜನೆ ಈ ಕೆಲಸದಿಂದ 2,32,000 ವರೆಗೆ ಹಣ ದೊರೆಯುತ್ತದೆ

Money: 2.30 ಲಕ್ಷ ಹಣ ನಿಮ್ಮದಾಗಬೇಕಾ? ಇದು ಕೇವಲ ಮಹಿಳೆಯರಿಗೆ ಇರೋ ಬಂಪರ್‌ ಯೋಜನೆ!

ಮಹಿಳಾ ಸಮ್ಮಾನ್ ಯೋಜನೆಯಿಂದ ವರ್ಷಕ್ಕೆ 7.5% ಬಡ್ಡಿ ಯನ್ನು ಪಡೆಯಬಹುದು, ಪ್ರತಿ ತ್ರೈಮಾಸಿಕದಲ್ಲಿ ಖಾತೆಗೆ ಸೇರಿಸಲಾಗುತ್ತದೆ. ಆದರೆ ಅವಧಿ ಮುಗಿಯುವ ಮೊದಲೇ ಅಸಲಾಗಲಿ ಬಡ್ಡಿ ಆಗಲಿ ಪಡೆಯಲಾಗುವುದಿಲ್ಲ.

WhatsApp Group Join Now
Telegram Group Join Now

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರವನ್ನು (MSSC) ಬಜೆಟ್ 2023 ರಲ್ಲಿ ಘೋಷಿಸಲಾಯಿತು. ಇದು ಮಹಿಳಾ ಹೂಡಿಕೆದಾರರಿಗೆ ಭಾರತ ಸರ್ಕಾರ ನೀಡುವ ಸಣ್ಣ ಉಳಿತಾಯ ಪ್ರಮಾಣಪತ್ರವಾಗಿದೆ. ಹೂಡಿಕೆಯ ಮೂಲಕ ಮಹಿಳೆಯರು ಮತ್ತು ಹೆಣ್ಣುಮಕ್ಕಳಿಗೆ ಆರ್ಥಿಕ ಸಬಲೀಕರಣವನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ಪ್ರಾರಂಭಿಸಲಾಗಿದೆ.
ಕಡಿಮೆ ಅವಧಿಯಲ್ಲಿ ಮಹಿಳೆಯರಿಗೆ ಉತ್ತಮ ಆದಾಯವನ್ನು ನೀಡಲು ಈ ಯೋಜನೆಯನ್ನು ವಿನ್ಯಾಸಗೊಳಿಸಲಾಗಿದೆ ಮತ್ತು ಸರ್ಕಾರವು ಇದನ್ನು 2025 ರವರೆಗೆ ಮುಂದುವರಿಸಲಿದೆ.
MSSC ಅನ್ನು ಬಜೆಟ್ 2024 ರಲ್ಲಿ ವಿಸ್ತರಿಸಲಾಗಿದೆಯೇ?: ಇಲ್ಲ, 2024 ರ ಬಜೆಟ್‌ನಲ್ಲಿ ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದ ಕುರಿತು ಯಾವುದೇ ಘೋಷಣೆ ಮಾಡಲಾಗಿಲ್ಲ. ಪ್ರಸ್ತುತ, ಬಡ್ಡಿ ದರ ಮತ್ತು ಹೂಡಿಕೆ ಸಮಯದ ಮಿತಿಯು ಮೊದಲಿನಂತೆಯೇ ಇರುತ್ತದೆ.
ಈ ಯೋಜನೆಯ ಪ್ರಮಾಣ ಪತ್ರವು ಎರಡು ವರ್ಷದ ಅವಧಿಯನ್ನು ಹೊಂದಿರುತ್ತದೆ, ಅಂದರೆ 2023 ರಿಂದ ಹಿಡಿದು20 25 ರವರೆಗೆ ಲಭ್ಯವಿರುತ್ತದೆ. ಯಾವುದೇ ಅಂಚೆ ಕಚೇರಿಯಲ್ಲಿ ಖಾತೆ ತೆರೆಯಬಹುದು. ಆದರೆ, ಕೆಲವು ಬ್ಯಾಂಕ್‌ಗಳು ಈ ಖಾತೆ ತೆರೆಯುವ ಸೌಲಭ್ಯವನ್ನೂ ನೀಡುತ್ತಿವೆ.

ಈ ಯೋಜನೆಯಲ್ಲಿ, ಯಾವುದೇ ವಯಸ್ಸಿನ ಭಾರತೀಯ ಮಹಿಳೆಯರು ಖಾತೆಯನ್ನು ತೆರೆಯಬಹುದು. ಇದಲ್ಲದೆ, ಪುರುಷ ಪೋಷಕರ ತಮ್ಮ ಅಪ್ರಾಪ್ತ ಮಕ್ಕಳ ಖಾತೆಯನ್ನು ತೆರೆಯಬಹುದು. ಈ ಯೋಜನೆಯು ಅಪ್ರಾಪ್ತ ಬಾಲಕಿಯರಿಗೆ ಹಣಕಾಸಿನ ಉತ್ಪನ್ನಗಳಲ್ಲಿ ಹೂಡಿಕೆ ಮಾಡಲು ಅವಕಾಶವನ್ನು ನೀಡುತ್ತದೆ.

ಮಹಿಳಾ ಸಮ್ಮಾನ್ ಉಳಿತಾಯ ಪ್ರಮಾಣಪತ್ರದಿಂದ ವರ್ಷಕ್ಕೆ 7.5% ಬಡ್ಡಿಯನ್ನು ಹೊಂದಬಹುದು. ಇದನ್ನು ಪ್ರತಿ ತ್ರೈಮಾಸಿಕದಲ್ಲಿ ಖಾತೆಗೆ ಸೇರಿಸದಿದ್ದರೆ. ಆದರೆ ಅವಧಿ ಮುಗಿಯುವ ಮೊದಲೇ ಅಸಲಾಗಲಿ ಬಡ್ಡಿಯಾಗಲಿ ಪಡೆಯಲಾಗುವುದಿಲ್ಲ.

ಈ ಯೋಜನೆಯ ಮುಕ್ತಾಯ ಅವಧಿಯು 2 ವರ್ಷಗಳು. ನೀವು ಎರಡು ಲಕ್ಷ ಹಣವನ್ನು ಈ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಅವಧಿಯ ನಂತರ ಬಡ್ಡಿ ಸೇರಿ 2.32 ಲಕ್ಷಹಣವನ್ನು ಪಡೆಯಬಹುದು

ಕನಿಷ್ಠ 1000 ರೂಪಾಯಿಗಳನ್ನು ಈ ಯೋಜನೆಯಲ್ಲಿ ಪೂರ್ಣ 2 ವರ್ಷಗಳವರೆಗೆ ಹೂಡಿಕೆ ಮಾಡಬಹುದು. ನೀವು ಈ ಯೋಜನೆಯಲ್ಲಿ ಹೆಚ್ಚು ಎಂದರೆ ಎರಡು ಲಕ್ಷದವರೆಗೆ ಹೂಡಿಕೆ ಮಾಡಬಹುದು,ರೂ 1000 ಕ್ಕಿಂತ ಹೆಚ್ಚಿನ ಮೊತ್ತವನ್ನು 100 ರ ಗುಣಗಳಲ್ಲಿ ಮಾತ್ರ ಠೇವಣಿ ಮಾಡಬಹುದು. ಈ ಖಾತೆನು ತೆರೆದು ಒಂದು ವರ್ಷದ ಅವಧಿಯ ನಂತರ 40% ಹಣವನ್ನು ಪಡೆಯಬಹುದು

WhatsApp Group Join Now
Telegram Group Join Now