DK ಬ್ರದರ್ಸ್‌ vs ‘ಹೃದಯ’ವಂತ ಚುನಾವಣೆ ಅಲ್ಲಿ ಹೆಚ್ಚಾಗುತ್ತಿದೆ ಕಾವು.!

ಸ್ನೇಹಿತರೆ ಮತ್ತೊಂದು ಲೇಖನಕ್ಕೆ ನಿಮಗೆ ಪ್ರೀತಿಯ ಸ್ವಾಗತ ಚುನಾವಣಾ ರಣಕಣ ರಂಗೇರಿದೆ. ಚುನಾವಣೆಗೆ ದಿನ ಹತ್ತಿರವಾಗುತ್ತಿದ್ದಂತೆ ಸುಡುವ ಬಿಸಿಲ ಅಂತೆಯೇ ಚುನಾವಣಾ ಕಾವು ಕೂಡ ಹೆಚ್ಚಾಗುತ್ತಿದೆ. ಅದರಲ್ಲೂ ನಮ್ಮ ರಾಜ್ಯದ ಎರಡು ಕ್ಷೇತ್ರಗಳು ಹೈವೋಲ್ಟೇಜ್ ಕ್ಷೇತ್ರವಾಗಿ ಬದಲಾಗಿವೆ. ಯಾವುದು ಅನ್ನೋದು ನಿಮಗೆ ಗೊತ್ತಿರಬಹುದು. ಒಂದು ಬೆಂಗಳೂರು ಗ್ರಾಮಾಂತರ ಮತ್ತೊಂದು ಹಾಸನ ಚುನಾವಣೆಗಳನ್ನ ಅರಿದು ಕುಡಿದಿರುವ ಡಿ ಕೆ ಬ್ರದರ್ಸ್ ಒಂದು ಕಡೆ ಆದ್ರೆ ಅದೆಷ್ಟು ಜನರಿಗೆ ಆರೋಗ್ಯದ ವಿಚಾರದಲ್ಲಿ ನೇರವಾಗಿ ಅದೆಷ್ಟೋ ಜನರ ಜೀವ ಉಳಿಸಿದ.

ಇಲ್ಲಿವರೆಗೆ ರಾಜಕೀಯ ಅಂದ್ರೆ ಏನು ಗೊತ್ತಿಲ್ಲದ ಡಾಕ್ಟರ್ ಮಂಜುನಾಥ್ ಮತ್ತೊಂದು ಕಡೆ ಇವರಿಗೆ ತುಂಬಾನೇ ಸಲೀಸಾಗಿ ಚುನಾವಣೆಯನ್ನ ಗೆಲ್ಲುತ್ತಿದ್ದ ಡಿಕೆ ಬ್ರದರ್ಸ್ ಗೆ ಈ ಬಾರಿ ಮೈತ್ರಿ ಪಕ್ಷಗಳು ಚೆಕ್ ಮೇಟ್ ಇಟ್ಟುಬಿಟ್ಟಿದ್ದವೆಯೇ? ಮಂಜುನಾಥ್ ಅನ್ನುವ ದೇವರಂತಹ ಮನುಷ್ಯರನ್ನ ಚುನಾವಣಾ ಅಖಾಡಕ್ಕೆ ಇಳಿಸಿ ಕನಕಪುರದ ಅಧಿಪತಿಗಳ ಮುಂದೆ ಬ್ರಹ್ಮಾಸ್ತ್ರವನ್ನೇ ಪ್ರಯೋಗ ಮಾಡಿ ಬಿಟ್ಟಿದ್ದಾರೆ. ಹೀಗಾಗಿ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರ ಹೈವೋಲ್ಟೇಜ್ ಕ್ಷೇತ್ರವಾಗಿ ಬದಲಾಗಿಬಿಟ್ಟಿದೆ. ಮತ್ತೊಂದು ಕಡೆ ಹಾಸನ ಲೋಕಸಭಾ ಕ್ಷೇತ್ರದಲ್ಲೂ ಕೂಡ ಇದೇ ರೀತಿಯ ಫೈಟ್ ಇದೆ.

WhatsApp Group Join Now
Telegram Group Join Now

ಅಲ್ಲಿಯ ಪರಿಸ್ಥಿತಿಗೂ ಇಲ್ಲಿಯ ಪರಿಸ್ಥಿತಿಗೂ ಅಜಗಜಾಂತರ ವ್ಯತ್ಯಾಸ ಇದೆ. ಬೆಂಗಳೂರು ಗ್ರಾಮಾಂತರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಒಗ್ಗಟ್ಟಿನ ಮಂತ್ರ ಜಪಿಸಿದ್ರೆ ಹಾಸನದಲ್ಲಿ ಮಾತ್ರ ಪರಿಸ್ಥಿತಿ ಬೇರೆ ಇದೆಯೇ? ಹಾಗಾದ್ರೆ ಈ ಕ್ಷೇತ್ರಗಳಲ್ಲಿ ಚುನಾವಣಾ ಅಖಾಡ ಯಾವ ರೀತಿ ಇದೆ? ಸದ್ಯದ ಮಟ್ಟಿಗೆ ಜನರ ಅಭಿಪ್ರಾಯ ಯಾರ ಕಡೆ ವಾಲಿದೆ? ಎಲ್ಲವನ್ನ ಡೀಟೇಲ್ ಆಗಿ ತೋರಿಸ್ತೀವಿ ನೋಡಿ. ಕಳೆದ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಕರ್ನಾಟಕದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು.

ರಾಜ್ಯದಲ್ಲಿ ಕೇಸರಿ ಪಾಳಯ ದೊಡ್ಡ ಮಟ್ಟದ ಗೆಲುವು ಸಾಧಿಸಿತು. ಹೀಗೆ ಬಿಜೆಪಿ ಕಳೆದ ಬಾರಿ ಕ್ಲೀನ್ ಸ್ವೀಪ್ ಮಾಡಿದರು. ಅದೊಂದು ಕ್ಷೇತ್ರದಲ್ಲಿ ಕೈ ಪಾಳಯದ ಮುಂದೆ ಬಿಜೆಪಿ ಮಂಕಾಗಿತ್ತು. ಆ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆದ್ದೇ ಗೆಲ್ಲುತ್ತೆ ಅಂತ ಎಲ್ಲ ಸಮೀಕ್ಷೆಗಳು ಕೂಡ ಹೇಳಿದ್ದರು. ಇಲ್ಲಿ ಕಾಂಗ್ರೆಸ್ ಗೆಲ್ಲುತ್ತೆ ಅಂತ ರಾಜಕೀಯದ ಬಗ್ಗೆ ಗೊತ್ತಿಲ್ಲದ ವ್ಯಕ್ತಿಗಳು ಕೂಡ ಹೇಳ್ತಾ ಇದ್ರು. ಕಾರಣ ಅದು ಡಿ ಕೆ ಬ್ರದರ್ಸ್ ಕೋಟೆ ಕನಕಪುರದ ಬಂಡೆ ಡಿ ಕೆ ಶಿವಕುಮಾರ್ ಅವರ ತಮ್ಮ ಪ್ರತಿನಿಧಿಸುವ ಕ್ಷೇತ್ರ ಅದು. ಹಾಗಾಗಿ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಸೋಲಿಸುವುದು ಅಷ್ಟು ಸುಲಭವಲ್ಲ. ಓದಿ ಬಂದು ಇಲ್ಲಿ ಡಿ ಕೆ ಸುರೇಶ್ ಗೆಲ್ಲುತ್ತಾರೆ ಅನ್ನುವ ಮಾತಿತ್ತು.

ಡಿಕೆ ಬ್ರದರ್ಸ್‌ಗೆ ಈ ಕ್ಷೇತ್ರದ ಮೇಲೆ ಅಷ್ಟು ಹಿಡಿತ ಇದೆ. ಕಳೆದ ಬಾರಿಯ ಚುನಾವಣೆಯಲ್ಲಿ ಎಲ್ಲರ ಲೆಕ್ಕಾಚಾರದಂತೆ ಡಿ ಕೆ ಸುರೇಶ್ ಗೆದ್ದು ಬೀಗಿದರು. ರಾಜ್ಯದಿಂದ ಲೋಕಸಭೆಗೆ ಆಯ್ಕೆಯಾದ ಏಕೈಕ ಕಾಂಗ್ರೆಸ್ ಸಂಸದ ಅಂದ್ರೆ ಅದು ಡಿ ಕೆ ಸುರೇಶ್ ಮಾತ್ರ ಈ ಬಾರಿ ಹೇಗಾದರೂ ಮಾಡಿ ಡಿ ಕೆ ಬ್ರದರ್ಸ್ ಅನ್ನ ಸೋಲಿಸಲೇ ಬೇಕು ಅಂತ ಕೇಸರಿ ಪಡೆ ಪಣ ತೊಟ್ಟಿದೆ. ಡಿಕೆ ಬ್ರದರ್ಸ್ನ್ನು ಸೋಲಿಸುವುದು ಅಷ್ಟು ಸುಲಭ ಅಲ್ಲ ಅನ್ನೋದು ಬಿಜೆಪಿಗೆ ಚೆನ್ನಾಗಿ ಗೊತ್ತಿದೆ. ಇದೇ ಕಾರಣಕ್ಕೆ ಬಿಜೆಪಿ ಜೆಡಿಎಸ್ ಜೊತೆ ಸೇರಿಕೊಂಡು ಮಾಸ್ಟರ್ ಪ್ಲಾನ್ ಮಾಡಿದ್ದು ಎಫ್ ಡಿ ಕೆ ಸುರೇಶ್ ಮುಂದೆ ಹೃದಯವಂತನ ತಂದು ನಿಲ್ಲಿಸುವ ಮೂಲಕ ಚುನಾವಣಾ ಲೆಕ್ಕಾಚಾರವನ್ನೇ ಬುಡಮೇಲು ಮಾಡುವಲ್ಲಿ ಸದ್ಯಕ್ಕೆ ಮೈತ್ರಿ ಪಕ್ಷಗಳು ಯಶಸ್ವಿ ಆಗಿದ್ದ ವಿ ಬಾಜಿ, ಪ್ರಧಾನಿ ದೇವೇಗೌಡರ ಅಳಿಯ ಡಾ. ಮಂಜುನಾಥ್ ಅವರು ಬಿಜೆಪಿ ಶಾಲು ಹಾಕಿಕೊಂಡು ಡಿ ಕೆ ಸುರೇಶ್ ವಿರುದ್ಧ ಸೆಣಸಾಡಲಿದ್ದಾರೆ.

ಅಲ್ಲಿಗೆ ಸುಲಭದಲ್ಲಿ ಗೆದ್ದುಬಿಡುತ್ತೇವೆ ಅಂತ ಅಂದುಕೊಂಡಿದ್ದ ಕಾಂಗ್ರೆಸ್‌ಗೆ ಇದು ಮಂಜುನಾಥ್ ಬಿಸಿ ತುಪ್ಪವಾಗಿ ಪರಿಣಮಿಸಿದ್ದಾರೆ. ಡಾಕ್ಟರ್ ಮಂಜುನಾಥ್ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೂಡ ಹೆಸರು ಮಾಡಿದವರು. ಇಡೀ ಕರ್ನಾಟಕಕ್ಕೆವರು ಯಾರು ಅನ್ನೋದು ಗೊತ್ತು. ಅವರು ಜಯದೇವ ಆಸ್ಪತ್ರೆಯ ನಿರ್ದೇಶಕರಾಗಿದ್ದಾಗ ಬಡ ಜನರಿಗೆ ಯಾವ ರೀತಿ ಸಹಾಯ ಮಾಡಿದ್ದಾರೆ ಅನ್ನೋದನ್ನ ಕರುನಾಡು ನೋಡಿದೆ. ಮತ್ತೊಂದು ಕಡೆ ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಅನ್ನುವ ಪಟ್ಟ ಕೂಡ ಡಾಕ್ಟರ್ ಮಂಜುನಾಥ್ ಅವರಿಗೆ ಇದೆ. ಆದರೆ ಅವರು ಈ ಬಾರಿ ಕಣಕ್ಕಿಳಿದಿರುವುದು ಬಿಜೆಪಿಯಿಂದ ಇಲ್ಲೇ ಮೈತ್ರಿ ಪಕ್ಷಗಳು ಮಾಸ್ಟರ್ ಸ್ಟ್ರೋಕ್ ಕೊಟ್ಟಿದ್ದು ಬೇರೆ ಕ್ಷೇತ್ರದಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ವೈಮನಸ್ಸು ಇದೆ.

ಇನ್ನು ಕೂಡ ಹೊಂದಾಣಿಕೆ ಸಾಧ್ಯವಾಗ್ತಾ ಇಲ್ಲ. ಅದಕ್ಕೆ ಉತ್ತಮ ಉದಾಹರಣೆ ಯೆ ಹಾಸನ ಕ್ಷೇತ್ರ ಹಾಸನದಲ್ಲಿ ಹೆಸರಿಗೆ ಮಾತ್ರ ಎಂಡ್ ಅಭ್ಯರ್ಥಿ ಇರೋದು ಅಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಎಲ್ಲವೂ ಸರಿಯಿಲ್ಲ. ಆದರೆ ಇಲ್ಲಿ ಅಂತಹ ಯಾವುದೇ ಗೊಂದಲ ಇಲ್ಲ. ಡಾಕ್ಟರ್ ಮಂಜುನಾಥ್ ಅಂತಹ ವ್ಯಕ್ತಿಯನ್ನ ವಿರೋಧ ಮಾಡೋದಕ್ಕೆ ಕೂಡ ಆಗೋದಿಲ್ಲ. ಹೀಗಾಗಿ ಈ ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವೆ ಹೊಂದಾಣಿಕೆ ಇದೆ. ಒಗ್ಗಟ್ಟು ಕೂಡ ಇದೆ. ಈ ಒಗ್ಗಟ್ಟು ಸದ್ಯ ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಪಕ್ಷಕ್ಕೆ ಮುಳುವಾದರೂ ಅಚ್ಚರಿ ಇಲ್ಲ. ಹಾಗಂತ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಡಿ ಕೆ ಸುರೇಶ್ ರನ್ನು ಸೋಲಿಸುವುದು ಅಷ್ಟು ಸುಲಭವಲ್ಲ.

ಅವರಿಗೆ ಚುನಾವಣೆಗಳನ್ನ ಎದುರಿಸೋದು ನೀರು ಕುಡಿದಷ್ಟೇ ಸುಲಭ. ಈಗಾಗಲೇ ಮೂರು ಬಾರಿ ಈ ಕ್ಷೇತ್ರದಲ್ಲಿ ಗೆದ್ದ ಅನುಭವ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಚುನಾವಣೆಗಳನ್ನು ಹೇಗೆ ಎದುರಿಸಬೇಕು? ಚುನಾವಣೆಯಲ್ಲಿ ಗೆಲ್ಲಬೇಕು ಅಂದ್ರೆ ಏನೆಲ್ಲ ಮಾಡಬೇಕು ಅನ್ನೋದು ಡಿಕೆ ಬ್ರದರ್ಸ್ ಗೆ ಚೆನ್ನಾಗಿ ಗೊತ್ತಿದೆ. ಹೀಗಾಗಿ ಬಿಜೆಪಿ ಅಂದುಕೊಂಡ ರೀತಿಯಲ್ಲಿ ಗೆಲ್ಲೋದಕ್ಕೆ ಸಾಧ್ಯವಿಲ್ಲ. ಆದರೆ ಫೈಟ್ ಅಂತೂ ಖಂಡಿತ ಬರುತ್ತೆ. ಮತ್ತೊಂದು ಕಡೆ ಡಿಕೆ ಬ್ರದರ್ಸ್ ಗೆ ಆಡಳಿತ ವಿರೋಧಿ ಅಲೆ ಕೂಡ ಮೂಲವಾಗಬಹುದು. ಅಲ್ಲಿನ ಜನ ನಿಧಾನವಾಗಿ ಬೇರೆ ಕಡೆ ಮುಖ ಮಾಡುವ ಲಕ್ಷಣಗಳು ಕೂಡ ಕಾಣಿಸುತ್ತಿದೆ. ಬದಲಾವಣೆಯ ಸಣ್ಣ ಗಾಳಿ ಒಂದು ಬೀಸುತ್ತಿದೆ. ಇಂಟ್ರೆಸ್ಟಿಂಗ್ ಸಂಗತಿ.

ಅಂದ್ರೆ ಕಳೆದ ಬಾರಿ ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿಯಾಗಿ ಚುನಾವಣೆ ಎದುರಿಸಿದ್ದವು. ಆದರೆ ಈ ಬಾರಿ ಜೆಡಿಎಸ್ ಬಿಜೆಪಿ ಪಾಳಯದಲ್ಲಿದೆ. ಕಳೆದ ಬಾರಿ ಡಿ ಕೆ ಸುರೇಶ್ ಅವರು 2,00,000 ಮತಗಳ ಅಂತರದಿಂದ ಗೆದ್ದಿದ್ದರು.

WhatsApp Group Join Now
Telegram Group Join Now