ಸಿಎಂ 1 ಲಕ್ಷ ಮನೆ ಯೋಜನೆ ಫಲಾನುಭವಿಗಳಿಗೆ ಗುಡ್ ನ್ಯೂಸ್; ಹಣವನ್ನು ಸರ್ಕಾರ ಭರಿಸಲಿದೆ
ಈ ಸುದ್ದಿ ರಾಜ್ಯದ ಜನತೆಗೆ ತುಂಬಾ ಸಿಹಿಯಾಗಿದೆ ಎನ್ನಬಹುದು. ಹೌದು, ಸರಕಾರದಿಂದ ವಸತಿ ಸೌಲಭ್ಯಕ್ಕಾಗಿ ಕಾದು ಕುಳಿತಿದ್ದ ಜನತೆಗೆ ಇದೊಂದು ಸಂತಸದ ಸುದ್ದಿ ಎಂದೇ ಹೇಳಬಹುದು. ಹೌದು, ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ಲಕ್ಷ ಮನೆ ಯೋಜನೆಯ ಫಲಾನುಭವಿಗಳಿಗೆ ಗುಡ್ ನ್ಯೂಸ್ ನೀಡಿದ್ದಾರೆ. ಇನ್ನು ಮುಂದೆ ಮುಖ್ಯಮಂತ್ರಿ ಒಂದು ಲಕ್ಷ ಮನೆ ಯೋಜನೆಗೆ ಆರ್ಥಿಕ ಹೊರೆ ಬಿಡಬಾರದೆಂದು ಮುಖ್ಯಮಂತ್ರಿಗಳು ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ. ಹೌದು, ಮುಖ್ಯಮಂತ್ರಿಗಳ ಒಂದು ಲಕ್ಷ ಮನೆ ಯೋಜನೆಯಡಿ ಫಲಾನುಭವಿಗಳ ಆರ್ಥಿಕ ಹೊರೆ ತಗ್ಗಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಮಹತ್ವದ ನಿರ್ಧಾರ ಕೈಗೊಂಡಿದ್ದಾರೆ.
ಹಣವನ್ನು ಸರ್ಕಾರ ಭರಿಸಲಿದೆ
ಹೌದು ಈ ಯೋಜನೆಯಡಿ ಲಾಭ ಪಡೆಯಲು ಸಾಕಷ್ಟು ಮಂದಿ ತುದಿಗಾಲಲ್ಲಿ ಕಾಯುತ್ತಿದ್ದಾರೆ. ಆದರೆ ವಂತಿಕೆ ಪವಿತಿಸೋದು ಹೇಗೆ ಅಂತ ಪಕ್ಕದ ಗೋಡೆಗೆ ದೀಪ ಇಟ್ಟು ಏನು ಮಾಡೋದು ಅಂತ ಯೋಚನೆ ಮಾಡ್ತಿದ್ದಾರೆ ಅನ್ನೋದು ಬಡತನ ರೇಖೆಗಿಂತ ಕೆಳಗಿರುವವರಿಗೆ ತುಂಬಾ ಸಿಹಿ ಸುದ್ದಿ.
ಹೌದು, ಈ ಯೋಜನೆಯಡಿ ಕೇಂದ್ರ ಸರಕಾರ 1.50 ಲಕ್ಷ ರೂ., ರಾಜ್ಯ ಸರಕಾರ ಸಾಮಾನ್ಯ ವರ್ಗಕ್ಕೆ 1.20 ಲಕ್ಷ ಹಾಗೂ ಎಸ್ಟಿ-ಎಸ್ಸಿ ವರ್ಗಕ್ಕೆ 2 ಲಕ್ಷ ರೂ. ನಂತರ ಬಂದಂತಹBJP ಸರ್ಕಾರದ ಯಡಿಯೂರಪ್ಪ ಸರ್ಕಾರವು ಕರ್ನಾಟಕದ ವೆಚ್ಚವನ್ನು 10 ಲಕ್ಷದ 60ಸಾವಿರಾ ರೂ. 60 ಸಾವಿರ ರೂಪಾಯಿ ಜಿಎಸ್ಟಿ ಸೇರಿ 11 ಲಕ್ಷ 20 ಸಾವಿರ ರೂ. ಇಷ್ಟು ಹಣ ಪಾವತಿಸುವುದು ಕಷ್ಟವಾಗಿದೆ ಎಂದು ಫಲಾನುಭವಿಗಳು ಸಚಿವರಿಗೆ ಮನವಿ ಸಲ್ಲಿಸಿದ್ದರು. ಏಕೆಂದರೆ ಟಿ ವರ್ಗದವರು 6.70 ಲಕ್ಷ ರೂಪಾಯಿ ಪಾವತಿಸಬೇಕು. ಇದರಿಂದ 12,153 ಕುಟುಂಬಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿವೆ.
ಈ ಹಿಂದೆ ಯೋಜನೆಯ ಲಾಭ ಪಡೆಯಲು ಕ್ರಮವಾಗಿ 8.50 ಲಕ್ಷ ಮತ್ತು 7.70 ಲಕ್ಷ ಪಾವತಿಸಬೇಕಿತ್ತು. 2020 ರಲ್ಲಿ ಯೂನಿಟ್ ವೆಚ್ಚ ಹೆಚ್ಚಳ ನಿರ್ಧಾರದ ಅಧಿಸೂಚನೆಯನ್ನು ಹೊರಡಿಸಿದಾಗ ಆರಂಭಿಕ ಠೇವಣಿ ಮೊತ್ತವನ್ನು ಪಾವತಿಸಿದ 12,153 ವ್ಯಕ್ತಿಗಳಿಗೆ ಮಾತ್ರ ಈ ನಿರ್ಧಾರವು ಅನ್ವಯಿಸುತ್ತದೆ. ಆರಂಭಿಕ ಠೇವಣಿ ಮೊತ್ತವನ್ನು ಪಾವತಿಸದ ಆನ್ಲೈನ್ ಅರ್ಜಿಗಳಿಗೆ ಅನ್ವಯಿಸುವುದಿಲ್ಲ ಎಂದು ವಸತಿ ಸಚಿವ ಜಮೀರ್ ಅಹ್ಮದ್ ಖಾನ್ ಸ್ಪಷ್ಟಪಡಿಸಿದ್ದಾರೆ.
ಹೌದು ಕಾಂಗ್ರೆಸ್ ಮತ್ತು ಬಿಜೆಪಿ ಶಾಸಕರು ಸಭೆಯಲ್ಲಿ ಭಾಗವಹಿಸಿದ್ದು, ಈ ನಿರ್ಧಾರ ಕೈಗೊಳ್ಳಲಾಗಿದೆ. ಟಿ. ಸೋಮಶೇಖರ್, ಎಸ್. ಆರ್. ವಿಶ್ವನಾಥ್, ಮಂಜುಳಾ ಲಿಂಬಾವಳಿ, ಎಂ. ಕೃಷ್ಣಪ್ಪ, ಮುನಿರಾಜು, ಶಿವಣ್ಣ ಭಾಗವಹಿಸಿ ಯೋಜನೆ ಪರವಾದ ನಿರ್ಧಾರಕ್ಕೆ ಕೈಜೋಡಿಸಿದ್ದರಿಂದ ಈಗ ಸಭೆಯಲ್ಲಿ ಈ ನಿರ್ಧಾರಕ್ಕೆ ಸೂಚನೆ ನೀಡಲಾಗಿದೆಯಂತೆ. ಸರಿಸುಮಾರು 121 ಕೋಟಿ 53 ಲಕ್ಷ ಪಾವತಿಸಲು ಸಿದ್ದರಾಮಯ್ಯ ಹೇಳಿದ್ದು, ಸರ್ಕಾರದಿಂದ ಅಧಿಸೂಚನೆ ಹೊರಡಿಸುವುದೊಂದೇ ಬಾಕಿ ಉಳಿದಿದೆ. ಅಧಿಸೂಚನೆ ಬಂದ ತಕ್ಷಣ ಅರ್ಜಿ ಸಲ್ಲಿಸುವ ಫಲಾನುಭವಿಗಳಿಗೆ ಯೋಜನೆಯ ಲಾಭ ಹೆಚ್ಚಾಗುವುದರಲ್ಲಿ ಸಂಶಯವಿಲ್ಲ.