ಟೀ ಪೌಡರ್: ಸದ್ಯದಲ್ಲೇ ರಾಜ್ಯದಲ್ಲಿ ಟೀ ಪೌಡರ್ ನಿಷೇಧಿಸಲಾಗುವುದು
(ಟೀ ಪೌಡರ್) ರಾಜ್ಯ ಸರ್ಕಾರ ಟೀ ಪ್ರಿಯರಿಗೆ ಶಾಕಿಂಗ್ ನ್ಯೂಸ್ ನೀಡಿದೆ. ಹೌದು, ಗೋಬಿ ಮಂಚೂರಿ ಮತ್ತು ಕಬಾಬ್ ನಲ್ಲಿ ಕೃತಕ ಬಣ್ಣವನ್ನು ಈಗಾಗಲೇ ನಿಷೇಧಿಸಲಾಗಿತ್ತು. ಈಗ ಟೀ ಪುಡಿಯಲ್ಲಿ ಕೃತಕ ಬಣ್ಣ ಮತ್ತು ರುಚಿ ಹೆಚ್ಚಿಸುವ ರಾಸಾಯನಿಕಗಳನ್ನು ಬಳಸುವುದರಿಂದ ಟೀ ಪುಡಿಯನ್ನೇ ನಿಷೇಧಿಸಲಾಗುವುದು ಎಂದು ತಿಳಿದು ಬಂದಿದೆ.
ಪ್ರಾಯೋಗಿಕ ಪರೀಕ್ಷೆಯಲ್ಲಿ ಚಹಾ ಪುಡಿಯಲ್ಲಿ ಕೃತಕ ಬಣ್ಣ ಮತ್ತು ರುಚಿ ವರ್ಧಕ ಇರುವುದು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಸರ್ಕಾರ ಇದನ್ನು ನಿಷೇಧಿಸಲು ಹೊರಟಿದೆ ಎಂದು ಗೊತ್ತಾಗಿದೆ.
ರಾಜ್ಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯಿಂದ ಈಗಾಗಲೇ ತೀರ್ಮಾನಿಸಲಾಗಿದ್ದು, ಸದ್ಯದಲ್ಲೇ ರಾಜ್ಯ ಸರ್ಕಾರದಿಂದ ಟೀ ಪುಡಿ ನಿಷೇಧಿಸಿ ಅಧಿಕೃತ ಆದೇಶ ಬರುವ ಸಾಧ್ಯತೆ ಇದೆ.