ಉಚಿತ ಬೋರ್ ವೆಲ್ ಕೊರೆಯಲು ಅರ್ಜಿ ಆಹ್ವಾನ!

ಬೋರ್ ವೆಲ್ ಸಹಾಯಧನ: ಬೋರ್ ವೆಲ್ ಕೊರೆಯಲು ಅರ್ಜಿ ಆಹ್ವಾನ!

(ಬೋರ್‌ವೆಲ್ ಸಬ್ಸಿಡಿ) ಬೋರ್‌ವೆಲ್ ಕೆಲವು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಕುಡಿಯುವ ನೀರಿನ ಮುಖ್ಯ ಮೂಲವಾಗಿದೆ. ಅಲ್ಲದೆ, ಗ್ರಾಮೀಣ ಪ್ರದೇಶದಲ್ಲಿ ಕೃಷಿ ಚಟುವಟಿಕೆಗಳಿಗೆ ಕೆಲವು ರೈತರು ಬೋರ್‌ವೆಲ್‌ಗಳನ್ನು ಅವಲಂಬಿಸಿದ್ದಾರೆ. ಹೀಗಾಗಿ ಈ ಯೋಜನೆ ಮೂಲಕ ಬೋರ್ ವೆಲ್ ಕೊರೆಸಲು ಸಾಲವನ್ನೂ ನೀಡಲಾಗುತ್ತದೆ. ಯಾವ ಯೋಜನೆ, ಎಷ್ಟು ಸಾಲ ಮತ್ತು ಯಾರು ಅರ್ಹರು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

WhatsApp Group Join Now
Telegram Group Join Now

 

 

 

ರೈತರಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಗಂಗಾ ಕಲ್ಯಾಣ ನೀರಾವರಿ ಯೋಜನೆ ಮೂಲಕ ಬೋರ್ ವೆಲ್ ಕೊರೆಯಲು ಆರ್ಥಿಕ ನೆರವು ನೀಡಲಾಗುತ್ತಿದೆ. ಇದರೊಂದಿಗೆ ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ತಮ್ಮ ಆದಾಯವನ್ನು ಹೆಚ್ಚಿಸಿಕೊಳ್ಳುವ ಅವಕಾಶವನ್ನು ಪಡೆಯುತ್ತಾರೆ.

 

 

 

ಹಾಗಾದರೆ ಯಾರು ಅರ್ಜಿ ಸಲ್ಲಿಸಲು ಅರ್ಹರು?:

 

ಹಿಂದುಳಿದ ವರ್ಗಗಳ Q-1, 2A, 3A, ಮತ್ತು 3B ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.

ಅಲ್ಲದೆ ಕನಿಷ್ಠ 2 ಎಕರೆ ಗರಿಷ್ಠ 5 ಎಕರೆ ಜಾಗವನ್ನು ಹೊಂದಿರಬೇಕು.

ಅರ್ಜಿ ಸಲ್ಲಿಸಲು ದಾಖಲೆಗಳು ಯಾವುವು?;

ಅರ್ಜಿದಾರರ ಆಧಾರ್ ಕಾರ್ಡ್

ಜಾತಿ ಮತ್ತು ಆದಾಯ ಪ್ರಮಾಣ ಪತ್ರ

ಮೈನರ್ ಮತ್ತು ಮೈನರ್ ಅಫಿಡವಿಟ್

ಬ್ಯಾಂಕ್ ಖಾತೆ

ಪಹಣಿ ಮತ್ತು ಪ್ರೂಟ್ಸ್ ಐಡಿ

ಪಡಿತರ ಚೀಟಿ ಸಂಖ್ಯೆ

ಗಂಗಾ ಕಲ್ಯಾಣ ಯೋಜನೆಗೆ ಯಾವ ನಿಗಮಗಳು ಅರ್ಜಿ ಸಲ್ಲಿಸಬಹುದು:

ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ

ಉಪ್ಪಾರ ಅಭಿವೃದ್ಧಿ ನಿಗಮ

ಮರಾಠಾ ಅಭಿವೃದ್ಧಿ ನಿಗಮ

ವಿಶ್ವಕರ್ಮ ಅಭಿವೃದ್ಧಿ ನಿಗಮ

ಮಡಿವಾಳ ಮಾಚಿದೇವ ಅಭಿವೃದ್ಧಿ ನಿಗಮ

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ

ಸವಿತಾ ಸಾಮಾಜಿಕ ಅಭಿವೃದ್ಧಿ ನಿಗಮ

ಅಲೆಮಾರಿ ಮತ್ತು ಅರೆ ಅಲೆಮಾರಿ ಅಭಿವೃದ್ಧಿ ನಿಗಮ

ಒಕ್ಕಲಿಗ ಅಭಿವೃದ್ಧಿ ನಿಗಮ

ಅರ್ಜಿಯನ್ನು ಎಲ್ಲಿ ಸಲ್ಲಿಸಬೇಕು?:

ನಿಮ್ಮ ಹತ್ತಿರದ ವಿಲೇಜ್ ಒನ್, ಬೆಂಗಳೂರು ಒನ್ ಅಥವಾ ಕರ್ನಾಟಕ ಒನ್ ನಲ್ಲಿ ನೀವು ಅರ್ಜಿ ಸಲ್ಲಿಸಬಹುದು.

WhatsApp Group Join Now
Telegram Group Join Now