BPL ಕಾರ್ಡ್ ಅನ್ನ ಭಾಗ್ಯ ಯೋಜನೆ ! ಹಣ ಜಮಾ ಸ್ಟೇಟಸ್ ಚೆಕ್ ಮಾಡುವ ಸಂಪೂರ್ಣ ಮಾಹಿತಿ ಇಲ್ಲಿದೆ.
ನೀವು ಈ ಲೇಖನವನ್ನು ಸಂಪೂರ್ಣವಾಗಿ ಓದಿದ ಬಳಿಕ ನೀವು ಪ್ರತಿ ತಿಂಗಳು ಅನ್ನಬಾಗ್ಯ ಯೋಜನೆ, ಅಕ್ಕಿಗೆ ಬದಲಾಗಿ ನೀಡುತ್ತಿರುವ ಹಣ, ನಿಮ್ಮ ಖಾತೆಗೆ ಯಾವ ದಿನಾಂಕ ನಿಮ್ಮ ಮನೆಯ ಯಜಮಾನಿಯ ಬ್ಯಾಂಕ್ ಖಾತೆಗೆ ಯಾವ ಬ್ಯಾಂಕ್ ಖಾತೆಗೆ ಎಷ್ಟು ಹಣ ಸರ್ಕಾರದಿಂದ ಜಮಾ ಆಗಿದೆ ಎಂಬುದನ್ನ ತಿಳಿಯಬಹುದು.
ಅನ್ನಭಾಗ್ಯ ಯೋಜನೆ ಈಗಾಗಲೇ ಜಾರಿಗೊಳಿಸಿದ್ದು 10 ಕೆಜಿ ಅಕ್ಕಿಯನ್ನು ನೀಡಲು ಸರ್ಕಾರ ಸಿದ್ಧವಿತ್ತು ಅಕ್ಕಿ ಸಿಗದೇ ಇರುವ ಕಾರಣ, 5 ಕೆಜಿಗೆ ಬದಲಾಗಿ 170RS ಬಿಪಿಎಲ್ ಕಾರ್ಡ್ ಸದಸ್ಯರಿಗೆ ನೀಡಲಾಗುತ್ತದೆ.
ನಿಮ್ಮ ಮನೆಯಲ್ಲಿ ಬಿಪಿಎಲ್ ಕಾರ್ಡನ್ನು ಮೂರು ಜನ ಸದಸ್ಯರು ಇದ್ದರೆ ನಿಮ್ಮ ಬ್ಯಾಂಕ್ ಖಾತೆಗೆ 510 ರೂಪಾಯಿ ಬರಲಿದೆ.
ನಿಮ್ಮ ಮನೆಯಲ್ಲಿ ಒಬ್ಬರು ಇದ್ದರೆ 170 ರೂಪಾಯಿಗಳು ಬರುತ್ತದೆ.
ಈ ರೀತಿಯಾಗಿ ನಿಮ್ಮ ಮನೆಯಲ್ಲಿ ಎಷ್ಟು ಜನ ಸದಸ್ಯರು ಇದ್ದಾರೋ ಅವರಿಗೆ 170ಯಂತೆ ಗುಣಾಕಾರ ಮಾಡಿ ಸರ್ಕಾರ ಹಣ ನೀಡಲಿದೆ.
ಪ್ರತಿ ತಿಂಗಳು ನಿಮ್ಮ ಖಾತೆಗೆ ಯಾರೊಬ್ಬ ಸದಸ್ಯರ ಹಣ ಬಂದಿಲ್ಲ ಎಂದರೆ ನೀವು ಆ ಕೂಡಲೇ ನಿಮ್ಮ ಬಿಪಿಎಲ್ ರೇಷನ್ ಕಾರ್ಡ್ ತೆಗೆದುಕೊಂಡು ನಿಮ್ಮ ಹತ್ತಿರದ ಆಹಾರ ಸರಬರಾಜು ಇಲಾಖೆಗೆ ಭೇಟಿ ನೀಡಿ ಹಾಗೂ ಅನ್ನಭಾಗ್ಯ ಯೋಜನೆಯ ಹಣ ಬರುತ್ತಿಲ್ಲ ಎಂಬುದನ್ನು ಅವರಿಗೆ ತಿಳಿಯಪಡಿಸಿದರೆ ಆಗಿರುವ ತೊಂದರೆಯನ್ನು ಸರಿಪಡಿಸುವ ಮಾರ್ಗವನ್ನು ನಿಮಗೆ ತಿಳಿಸುತ್ತಾರೆ.
ಪ್ರತಿ ತಿಂಗಳು ಹಣ ಬಂದಿದೆಯ ಎಂಬುದನ್ನು ಪರೀಕ್ಷಿಸುವುದು ಹೇಗೆ ?
ನೀವು ಗೂಗಲ್ ಪ್ಲೇ ಸ್ಟೋರ್ ನಲ್ಲಿ ಡಿಬಿಟಿ ಎಂಬ ಆಪ್ ಅನ್ನು ಡೌನ್ಲೋಡ್ ಮಾಡುವ ಮೂಲಕ ಅದರಲ್ಲಿ ಮನೆಯ ಯಜಮಾನಿನ ಆಧಾರ್ ನಂಬರ್ ಅನ್ನು ನಮೂದಿಸಿ ಹಾಗೂ ಆಧಾರ್ ನಂಬರ್ ಗೆ ಒಂದು ಒಟಿಪಿ ಬರುತ್ತದೆ ಅದನ್ನು ಸರಿಯಾಗಿ ನಮೂದಿಸಿದ ಬಳಿಕ, ಎಡಕ್ಕೆ ಮೂರು ಗೆರೆಗಳು ಕಾಣುತ್ತವೆ ಅಲ್ಲಿ ನಿಮಗೆ ಎಲ್ಲಾ ಆಯ್ಕೆಗಳು ಸಿಗಲಿದೆ ಅವುಗಳ ಮೇಲೆ ನೀವು ಕ್ಲಿಕ್ ಮಾಡುವ ಮೂಲಕ ಯಾವ ದಿನಾಂಕ ಎಷ್ಟು ಹಣ ಜಮಾ ಆಗಿದೆ ಅನ್ನಭಾಗ್ಯ ಯೋಜನೆ ಅಣ ಎಷ್ಟು ಬಂದಿದೆ ಹಾಗೂ ಗೃಹಲಕ್ಷ್ಮಿ ಯೋಜನೆ ಹಣ ಎರಡು ಸಾವಿರ ಪ್ರತಿ ತಿಂಗಳು ಯಾವ ದಿನಾಂಕ ಜಮಾ ಆಗಿದೆ ಅನ್ನಭಾಗ್ಯ ಯೋಜನೆ ಅಡಿಯಲ್ಲಿ ಯಾವ ಬ್ಯಾಂಕ್ ಖಾತೆಗೆ ಎಷ್ಟು ಹಣ ಬಂದಿದೆ ಎಂಬುದನ್ನು ತಿಳಿಯಬಹುದು.
ಅಥವಾ ಮನೆಯ ಯಜಮಾನಿನ ಬ್ಯಾಂಕ್ ಖಾತೆಗೆ ಹಣ ಜಮಾ ಆಗಿದೆಯೇ ಎಂಬುದನ್ನು ಬ್ಯಾಂಕಿ ನೇರವಾಗಿ ಹೋಗಿ ನಿಮ್ಮ ಪಾಸ್ ಬುಕ್ ಮೂಲಕ ತಿಳಿಯಬಹುದು.
ನೀವು ಮನೆಯಲ್ಲಿ ಕುಳಿತು ತಿಳಿಯಬೇಕು ಎಂದರೆ ನಿಮ್ಮ ಹತ್ತಿರ ಸ್ಮಾರ್ಟ್ ಫೋನ್ ಇದ್ದರೆ ಆನ್ಲೈನ್ ಮೂಲಕ ಬ್ಯಾಂಕ್ಗೆ ಸಂಬಂಧಿಸಿದ ಪಾಸ್ ಬುಕ್ ಆಪ್ ಡೌನ್ಲೋಡ್ ಮಾಡಿ ಹಾಗು ಅದರಲ್ಲಿ ಕಸ್ಟಮರ್ ಐಡಿ ಹಾಕುವ ಮೂಲಕ ಬ್ಯಾಂಕಿಗೆ ಎಷ್ಟು ಹಣ ಜಮಾ ಆಗಿದೆ ಎಷ್ಟು ಹಣ ಹೊರಗೆ ಹೋಗಿದೆ ಯಾವಾಗ ನಿಮ್ಮ ಗೃಹಲಕ್ಷ್ಮಿ ಅನ್ನ ಭಾಗ್ಯ ಯೋಜನೆಗಳ ಬಂದಿದೆ ಎಂಬುದನ್ನು ತಿಳಿಯಬಹುದು.
ನಿಮಗೆ ಇನ್ನು ಸಹ ಅನ್ನ ಭಾಗ್ಯ ಯೋಜನೆ ಹಣ ಬರುತ್ತಿಲ್ಲ ಎಂದರೆ ಏನು ಮಾಡುವುದು ?
ನೀವು ಈ ಕೂಡಲೇ ನಿಮ್ಮ ಹತ್ತಿರದ ಆಹಾರ ನಾಗರಿಕ ಸರಬರಾಜು ಇಲಾಖೆ (food office) ಗೆ ಭೇಟಿ ನೀಡಿ.
ಈ ಕೆಳಗಿನ ದಾಖಲೆಗಳನ್ನು ತೆಗೆದುಕೊಂಡು ಹೋಗಿ.
- ಮನೆಯಲ್ಲಾ ಸದಸ್ಯರ ಆಧಾರ್ ಕಾರ್ಡ್.
- ನಿಮ್ಮ ಬಿಪಿಎಲ್ ರೇಷನ್ ಕಾರ್ಡ್.
- ಆದಾಯ ಮತ್ತು ಜಾತಿ ಪ್ರಮಾಣ ಪತ್ರ
- ಚುನಾವಣಾ ಗುರುತಿನ ಚೀಟಿ ಸೇರಿದಂತೆ
- ಇತರೆ ದಾಖಲೆಗಳೊಂದಿಗೆ ಅಧಿಕಾರಿಗಳನ್ನು ಭೇಟಿ ಮಾಡಿರಿ.
ಸರ್ಕಾರವು ಈ ಯೋಜನೆಯನ್ನು ಬಡತನ ರೇಖೆಗಿಂತ ಕೆಳಗಿರುವವರಿಗೋಸ್ಕರ ಅವರ ಪ್ರತಿನಿತ್ಯ ಆಹಾರ ಸೇವಿಸಲಿ ಸರ್ಕಾರದಿಂದ ಉಚಿತವಾಗಿ ಅವರಿಗೆ ಆಹಾರ ಧಾನ್ಯಗಳು ಸಿಗಲಿ ಎಂಬ ಉದ್ದೇಶದಿಂದ ಈ ಯೋಜನೆಯನ್ನು ಆರಂಭಿಸಿದ್ದು. ಬಡವರು ಬಿಪಿಎಲ್ ಕಾರ್ಡ್ ಒಂದನ್ನು ಅವಕಾಶ ನೀಡಿದೆ ಬಿಪಿಎಲ್ ಕಾರ್ಡ್ ಹೊಂದಿದ ವರಿಗೆ ಸರ್ಕಾರದ ಲಾಭಗಳು ಸಿಗಲಿದೆ.
ಅಕ್ಕಿ ಸಿಗದೆ ಇರುವ ಕಾರಣ ಕೆಲವು ಕಡೆ 3 ಕೆ.ಜಿ ಅಕ್ಕಿ ಹಾಗೂ 2 ಕೆಜಿ ರಾಗಿ ಅಥವಾ ಗೋಧಿ ಮತ್ತು ಜೋಳ ಸೇರಿದಂತೆ ಇತರೆ ಧಾನ್ಯಗಳನ್ನು ಸಹ ನೀಡುತ್ತಿದ್ದಾರೆ ಆದರೆ 5 ಕೆಜಿ ಅಕ್ಕಿಗೆ ಸಮನಾಗಿ ಬೇರೆ ಧಾನ್ಯವನ್ನು ಅಕ್ಕಿಗೆ ಬದಲಾಗಿ ನೀಡುತ್ತಿದ್ದಾರೆ.
ಇನ್ನು ಉಳಿದ ಐದು ಕೆಜಿಗೆ ಬದಲಾಗಿ ಕರ್ನಾಟಕ ರಾಜ್ಯದಾದ್ಯಂತ ಪ್ರತಿ ಮನೆಯ ಬಿಪಿಎಲ್ ಕಾರ್ಡ್ ನ ಒಬ್ಬ ಸದಸ್ಯರಿಗೆ 170 ರೂಪಾಯಿಗಳು ಜಮಾ ಆಗಲಿದೆ. ಹಾಗೂ 5ಕೆಜಿ ಅಕ್ಕಿ ಉಚಿತವಾಗಿ ಕರ್ನಾಟಕ ಸರ್ಕಾರ ನೀಡಲಿದೆ.
ಕರ್ನಾಟಕ ಸರ್ಕಾರ ಸತ್ಯ ಸಮರ್ಥ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಉಚಿತವಾಗಿ ವಾಟ್ಸಾಪ್ ಅಥವಾ ಟೆಲಿಗ್ರಾಂ ಮೂಲಕ ತಿಳಿಸಲು ಇಚ್ಚಿಸುತ್ತದೆ, ಧನ್ಯವಾದಗಳು.
ಇನ್ನಷ್ಟು ತಿಳಿಯರಿ:
PM Kisan Yojana: ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ರೈತರಿಗೆ ಬ್ಯಾಡ್ ನ್ಯೂಸ್