ಮೌಲ್ಯಂಕನ 5,8,9ನೇ ತರಗತಿ ಮಾದರಿ ಪ್ರಶ್ನೆ ಪತ್ರಿಕೆ ಪ್ರಕಟ ಪ್ರಶ್ನೆ ಪತ್ರಿಕೆಯ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ
ಕರ್ನಾಟಕ ಶಾಲಾ ಪರೀಕ್ಷೆ ನಿರ್ಣಯ ಮಂಡಳಿ 5 8 9ನೇ ತರಗತಿಯವರೆಗೆ ಉಪಯೋಗವಾಗದೆಂದು ಹಾಗೆ ಪರೀಕ್ಷಾ ಸಿದ್ಧತೆಗೆ ಅನುಕೂಲವಾಗಲೆಂದು ಮಾದರಿ ಪ್ರಶ್ನೆ ಪತ್ರಿಕೆಯನ್ನು ಬಿಡುಗಡೆ ಮಾಡಿದೆ.
ಇದು ಪಬ್ಲಿಕ್ ಪರೀಕ್ಷೆ ಆದುದರಿಂದ ದಕ್ಕಾಗಿ ವಿದ್ಯಾರ್ಥಿಗಳಿಗೆ ಭಯ ಪಡಬಾರದೆಂದು ಈ ಮಂಡಳಿಯು ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಪ್ರಕಟ ಮಾಡಿದೆ ಇದರಿಂದ ವಿದ್ಯಾರ್ಥಿಗಳು ಯಾವ ಯಾವ ರೀತಿಯ ಪ್ರಶ್ನೆಗಳು ಬರುತ್ತೆ ಎಂದು ಅರಿತುಕೊಂಡು ಅವರ ಆತಂಕ ದೂರವಾಗಲೆಂದು ಮಂಡಳಿ ನಿರ್ಣಯ ಮಾಡಿದೆ.
5,8,9ನೇ ತರಗತಿಯ ಮಾದರಿ ಪ್ರಶ್ನೆ ಪತ್ರಿಕೆ ಹೇಗಿದೆ ??
40 ಅಂಕದ ಪ್ರಶ್ನೆ ಪತ್ರಿಕೆಯನ್ನು 5ನೇ ತರಗತಿಯವರಿಗೆ ನೀಡಲಾಗಿದೆ, ಹಾಗೆ ಎರಡು ಗಂಟೆ ಸಮಯ ನಿಗದಿಪಡಿಸಲಾಗಿದೆ. ಮೊದಲು ಒಂದು ಅಂಕಕ್ಕೆ 14 ಪ್ರಶ್ನೆಗಳನ್ನು ಬರೆಯಬೇಕು, 2 ಪ್ರಶ್ನೆಗಳು 3 ಅಂಕಕ್ಕೆ ಇರುತ್ತವೆ, 4 ಅಂಕದ ಮೂರು ಪ್ರಶ್ನೆಗಳು ಕೂಡ ಇರುತ್ತದೆ ಮಾದರಿ ಪ್ರಶ್ನೆ ಪತ್ರಿಕೆ ಪ್ಯಾಟರ್ನ್ ಆಗಿದೆ.
ಹಾಗೆಯೇ 8ನೇ ತರಗತಿಯವರಿಗೆ ಐವತ್ತು ಅಂಕದ ಪರೀಕ್ಷೆಯನ್ನು ನಡೆಸಲಾಗುತ್ತದೆ. ಎರಡು ಗಂಟೆ 30 ನಿಮಿಷಗಳ ಕಾಲ ಈ ಪರೀಕ್ಷೆಯ ಅವಧಿ ನಿಗದಿಪಡಿಸಲಾಗಿದೆ, 1 ಅಂಕಕ್ಕೆ 20 ಪ್ರಶ್ನೆಗಳಿರುತ್ತವೆ, 2 ಅಂಕಗಳಿಗೆ 6 ಪ್ರಶ್ನೆಗಳು ಇರುತ್ತವೆ, 3 ಅಂಕಕ್ಕೆ 3 ಪ್ರಶ್ನೆಗಳು ಇರುತ್ತವೆ, ನಾಕು ಅಂಕಕ್ಕೆ ಮೂರು ಪ್ರಶ್ನೆಗಳನ್ನು ಹಾಕಲಾಗಿದೆ.
9ನೇ ತರಗತಿಯವರೆಗೆ ಮಾದರಿ ಪ್ರಶ್ನೆ ಪತ್ರಿಕೆ ಹೇಗಿರುತ್ತದೆ ??
ಈ ತರಗತಿಯವರಿಗೆ ನೂರು ಅಂಕಕ್ಕೆ ಪರೀಕ್ಷೆ ನಡೆಸಲಾಗುತ್ತದೆ, 3 :15 ನಿಮಿಷಗಳ ಕಾಲ ಸಮಯವನ್ನು ನಿಗದಿಪಡಿಸಲಾಗಿದೆ.
ಒಂದು ಅಂಕಕ್ಕೆ 17 ಪ್ರಶ್ನೆಗಳು ಇರುತ್ತವೆ, ಎರಡು ಅಂಕಕ್ಕೆ 10 ಪ್ರಶ್ನೆಗಳಿರುತ್ತವೆ, 3 ಅಂಕಕ್ಕೆ 11 ಪ್ರಶ್ನೆಗಳು ಇರುತ್ತವೆ, 4 ಅಂಕಕ್ಕೆ 5 ಪ್ರಶ್ನೆಗಳು ಇರುತ್ತವೆ, 5 ಅಂಕಕ್ಕೆ 2 ಪ್ರಶ್ನೆಗಳನ್ನು ಹಾಕಲಾಗುತ್ತದೆ ಮಾದರಿ ಪ್ರಶ್ನೆ ಪತ್ರಿಕೆಯು ಇದೇ ರೀತಿ ಇರುತ್ತದೆ ಹಾಗೆ ಪಬ್ಲಿಕ್ ಎಕ್ಸಾಮ್ ನಲ್ಲಿ ಇದೇ ರೀತಿಯ ಪ್ಯಾಟರ್ನ್ ಅನ್ನು ಅನುಸರಿಸಲಾಗುತ್ತದೆ.
ವಿದ್ಯಾರ್ಥಿಗಳಿಗೆ ಕಿವಿಮಾತು : ಪರೀಕ್ಷೆಗೆ ಚೆನ್ನಾಗಿ ಓದಿ, ಭಯಪಡಬೇಡಿ, ಪರೀಕ್ಷೆಯ ಇಂದಿನ ದಿನವೇ ನಿಮ್ಮ ಹಾಲ್ ಟಿಕೆಟ್ ಅನ್ನು ಸಿದ್ಧಪಡಿಸಿಟ್ಟುಕೊಳ್ಳಿ, ಪರೀಕ್ಷೆಗೆ ಹಾಜರಾಗುವ ಮುನ್ನ ನಿಮ್ಮ ಹಾಲ್ ಟಿಕೆಟ್ ಇದೆಯೇ ಎಂದು ಪರೀಕ್ಷಿಸಿಕೊಳ್ಳಿ.
ಇದೇ ರೀತಿಯ ದಿನನಿತ್ಯದ ಹೆಚ್ಚಿನ ಮಾಹಿತಿಗಾಗಿ ನಮ್ಮ ವಾಟ್ಸಪ್ ಹಾಗೂ ಟೆಲಿಗ್ರಾಂ ಗ್ರೂಪ್ಗೆ ಜಾಯಿನ್ ಆಗಿ.
ಕರ್ನಾಟಕ ಸರ್ಕಾರ ಸತ್ಯ ಸಮರ್ಥ ಸಂಪೂರ್ಣವಾದ ಮಾಹಿತಿಯನ್ನು ನಿಮಗೆ ಉಚಿತವಾಗಿ ವಾಟ್ಸಾಪ್ ಅಥವಾ ಟೆಲಿಗ್ರಾಂ ಮೂಲಕ ತಿಳಿಸಲು ಇಚ್ಚಿಸುತ್ತದೆ, ಧನ್ಯವಾದಗಳು.