BplCard: ಪಡಿತರ ಚೀಟಿದಾರರು ಆದಾಯ ಪ್ರಮಾಣ ಪತ್ರ ಸಲ್ಲಿಸಬೇಕೆ?
(RationCard:) ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆದರೆ, ಬಡತನ ರೇಖೆಗಿಂತ ಕೆಳಗಿರುವ ಜನರಿಗೆ ನೀಡಲಾಗುವ ಬಿಪಿಎಲ್ ಕಾರ್ಡ್‌ಗಳ ಸಂಖ್ಯೆ ಹೆಚ್ಚಾಗಿದೆ. ಏಕೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಶ್ನಿಸಿದರು. ಹೀಗಾಗಿ ಈ ಜಿಲ್ಲೆಯಲ್ಲಿ ಎಂಟು ದಿನಗಳಲ್ಲಿ 7,500ಕ್ಕೂ ಹೆಚ್ಚು ಆದಾಯ ಪ್ರಮಾಣ ಪತ್ರದ ಅರ್ಜಿಗಳು ಸಲ್ಲಿಕೆಯಾಗಿವೆ.
ಹೌದು, ಬಡತನ ರೇಖೆಗಿಂತ ಕೆಳಗಿರುವವರು ಬಿಪಿಎಲ್ ಪಡಿತರ ಚೀಟಿ ಪಟ್ಟಿಯಿಂದ ಹೊರಗುಳಿದಿರುವ ಕಾರಣ ಕಲಬುರಗಿ ನಗರದಲ್ಲಿ ಎಂಟು ದಿನಗಳಲ್ಲಿ 7,500ಕ್ಕೂ ಹೆಚ್ಚು ಆದಾಯ ಪ್ರಮಾಣ ಪತ್ರದ ಅರ್ಜಿಗಳು ಸಲ್ಲಿಕೆಯಾಗಿವೆ.
ಹೆಚ್ಚಾಗಿ ಮೇ ನಿಂದ ಜೂನ್ ವರೆಗೆ ಆದಾಯ ಪ್ರಮಾಣಪತ್ರಕ್ಕಾಗಿ ಕರೆಯುತ್ತಾರೆ. ಆ ಸಮಯದಲ್ಲಿ ರಾಜ್ಯದ ಎಲ್ಲೆಡೆ ಶಾಲಾ-ಕಾಲೇಜುಗಳ ಆರಂಭದ ದಿನವಾದ್ದರಿಂದ ಹೆಚ್ಚು ಅರ್ಜಿಗಳು ಬರುತ್ತವೆ. ಅದರ ನಂತರ, ಉಳಿದ 10 ತಿಂಗಳವರೆಗೆ ಅರ್ಜಿಗಳ ಸಂಖ್ಯೆ ಕಡಿಮೆ ಇತ್ತು. ಆದರೆ, ಈ ಬಾರಿ ಜುಲೈ ಮಧ್ಯಭಾಗದಿಂದ ಮತ್ತೆ ಸೀಸನ್ ಆರಂಭವಾದಂತಿದೆ. ಎಂಟು ದಿನಗಳಲ್ಲಿ ಕಲಬುರಗಿ ನಗರದಲ್ಲಿ ಆದಾಯ ಮತ್ತು ಜಾತಿ ಪ್ರಮಾಣ ಪತ್ರಕ್ಕಾಗಿ 7,500ಕ್ಕೂ ಹೆಚ್ಚು ಅರ್ಜಿಗಳು ಸಲ್ಲಿಕೆಯಾಗಿವೆ.
ಇಷ್ಟೊಂದು ಆದಾಯ ಪ್ರಮಾಣ ಪತ್ರ ಸಲ್ಲಿಕೆ ಏಕೆ:
ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವವರ ಸಂಖ್ಯೆಯಲ್ಲಿ ಇಳಿಕೆಯಾಗಿದೆ. ಆದರೆ, ರಾಜ್ಯದಲ್ಲಿ ಮಾತ್ರ ಬಡತನ ರೇಖೆಗಿಂತ ಕೆಳಗಿರುವವರಿಗೆ ನೀಡುತ್ತಿರುವ ಬಿಪಿಎಲ್ ಸಂಖ್ಯೆ ಹೆಚ್ಚಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪ್ರಶ್ನಿಸಿದ್ದರು. ಈಗ ಜನರು ಬಡತನ ರೇಖೆಗಿಂತ ಕೆಳಗಿದ್ದೇವೆ ಎಂದು ತೋರಿಸಲು ಆದಾಯ ಪ್ರಮಾಣಪತ್ರದ ಮೊರೆ ಹೋಗುತ್ತಿದ್ದಾರೆ.