ನಾವು ಬ್ಯಾಂಕ್ ಗಳಲ್ಲಿ ಸಾಮಾನ್ಯವಾಗಿ ಉಳಿತಾಯದ ಹಣವನ್ನು ಡೆಪೋಸಿಟ್ ಮಾಡುತ್ತೇವೆ ಇದಕ್ಕೆ ಬ್ಯಾಂಕ್ ಗಳು ಸರಿಯಾಗಿ ಬಡ್ಡಿಯನ್ನು ಕೂಡ ನೀಡುತ್ತವೆ. (Canara bank) ಹಾಗಾಗಿ ಈಗ ಕೆನರಾ ಬ್ಯಾಂಕ್ ಕಡೆಯಿಂದ ಅತ್ಯುತ್ತಮ ಆಫರ್ ಘೋಷಣೆಯಾಗಿದ್ದು ನೀವು ಇಲ್ಲಿ ಕಡಿಮೆ ಅವಧಿಗೆ ಹೆಚ್ಚು ಲಾಭವನ್ನು ಗಳಿಸಲು ಸಾಧ್ಯವಿದೆ.
ರಾಷ್ಟ್ರೀಕೃತ ಬ್ಯಾಂಕ್ ಗಳು ಸಾಮಾನ್ಯವಾಗಿ ಇತ್ತೀಚಿನ ದಿನಗಳಲ್ಲಿ ಬ್ಯಾಂಕ್ ಅಕೌಂಟ್ ಹೊಂದಿರುವವರಿಗೆ ಬ್ಯಾಂಕಿನಲ್ಲಿ ಠೇವಣಿ ಹಣದ ಮೇಲೆ ಉತ್ತಮ ಬಡ್ಡಿ ದರವನ್ನು ಘೋಷಿಸಿದೆ. ಇದೀಗ ಇದೇ ನಾಗರಿಕರ ಹೆಸರಿನಲ್ಲಿ ಠೇವಣಿಯನ್ನು ಇದ್ದರೆ ಸಾಮಾನ್ಯ ನಾಗರಿಕರಿಗಿಂತ ಹೆಚ್ಚಿನ ದರದಲ್ಲಿ ಅವರಿಗೆ ಬಡ್ಡಿ ಕೂಡ ಸಿಗುತ್ತದೆ.
ಹಾಗಾಗಿ ಕೆನರಾ ಬ್ಯಾಂಕ್ 444 ದಿನಗಳ ಅವಧಿಯ ಠೇವಣಿ ಏನಾದರೂ ಇಟ್ಟರೆ ಅದರ ಮೇಲೆ ಉತ್ತಮ ಬಡ್ಡಿ ದರವನ್ನು ಒದಗಿಸುತ್ತದೆ. ಇದೀಗ ನೀವೇನಾದರೂ ಆ ಅವಧಿಗೆ ಹಣವನ್ನು ಹೂಡಿಕೆ ಮಾಡಿದರೆ ನಿಮಗೆ ಅತ್ಯುತ್ತಮ ಲಾಭ ಸಿಗುತ್ತದೆ ಮತ್ತು ಗಳಿಸಿಕೊಳ್ಳಬಹುದು.
ಕೆನರಾ ಬ್ಯಾಂಕ್ ನ ಠೇವಣಿ ಮೊತ್ತ:
ಕೆನರಾ ಬ್ಯಾಂಕ್ ನಲ್ಲಿ ಫಿಕ್ಸೆಡ್ ಡೆಪಾಸಿಟ್ ಮಾಡುತ್ತಿದ್ದವರಿಗೆ 7% ದರದ ಮೇಲೆ ಹಣವನ್ನು ನೀಡಲಾಗುತ್ತಿತ್ತು. ಆದರೆ ಈಗ ಅದನ್ನು ಹೆಚ್ಚಿಗೆ ಮಾಡಲಾಗಿದ್ದು 7.25% ಸಾಮಾನ್ಯ ಜನರಿಗೆ ಬಡ್ಡಿದರವನ್ನು ನೀಡಲಾಗುತ್ತಿದೆ. ಮತ್ತು ಹಿರಿಯ ನಾಗರಿಕರಿಗೆ 7.75% ಬಡ್ಡಿದರವನ್ನು ನೀಡಲಾಗುತ್ತದೆ. ಹಾಗಾಗಿ 44 ದಿನಗಳ ಎಫ್ ಡಿ ಠೇವಣಿಯ ಮೇಲೆ ಎಷ್ಟು ಲಾಭವನ್ನು ನೀವು ಪಡೆದುಕೊಳ್ಳಬಹುದು ಎಂದು ಈಗ ತಿಳಿಯೋಣ.
ಒಂದು ವೇಳೆ ನೀವೇನಾದರೂ ಸಾಮಾನ್ಯ ನಾಗರಿಕರಾಗಿದ್ದು 444 ದಿನಗಳ ಅವಧಿಯವರೆಗೆ 3 ಲಕ್ಷ ರೂಪಾಯಿಗಳನ್ನು ನೀವು ಠೇವಣಿ ಮಾಡಿದ್ದೀರಾ ಎಂದು ಭಾವಿಸಿಕೊಳ್ಳಿ ಈ ಒಂದು ಠೇವಣಿಯ ಅವಧಿ ಮುಗಿಯುವ ಹೊತ್ತಿಗೆ 7.25% ಬಡ್ಡಿ ದರದ ಆಧಾರದ ಮೇಲೆ ನಿಮಗೆ 3.27 ಲಕ್ಷ ರೂಪಾಯಿಗಳನ್ನು ನೀವು ಪಡೆದುಕೊಳ್ಳಬಹುದಾಗಿದೆ.
ಹಿರಿಯ ನಾಗರಿಕರ ಠೇವಣಿಯ ಹೆಚ್ಚಿನ ಬಡ್ಡಿದರ :
ಈಗ ಹಿರಿಯ ನಾಗರಿಕರಿಗೆ 0.5% ಬಡ್ಡಿ ದರವನ್ನು ಹೆಚ್ಚು ಮಾಡಲಾಗಿದ್ದು ವಾರ್ಷಿಕಕ್ಕೆ 7.75 % ಬಡ್ಡಿದರವನ್ನು ನೀವು ಪಡೆಯಬಹುದು ಒಂದು ವೇಳೆ 444 ದಿನಗಳ ಅವಧಿಯವರೆಗೆ ನೀವೇನಾದರೂ ಮೂರು ಲಕ್ಷ ರೂಪಾಯಿಗಳನ್ನು ನೀವು ಠೇವಣಿ ಮಾಡಿದರೆ ನಿಮಗೆ ಸಿಗುವ ಒಟ್ಟು ಮೊತ್ತ ₹3,29,000 ಆಗಿರುತ್ತದೆ.
ಕೆನರಾ ಬ್ಯಾಂಕ್ ನಲ್ಲಿ ನೀವು ಹೀಗೆ ಮೂರು ಲಕ್ಷ ರೂಪಾಯಿಗಳನ್ನು ನೀವೇನಾದರೂ ಠೇವಣಿ ಮಾಡಿದರೆ ಒಂದು ವರ್ಷದ ಅವಧಿಯಲ್ಲಿ ₹29,000 ಬಡ್ಡಿ ಹಣವನ್ನು ನೀವು ಪಡೆದುಕೊಳ್ಳಬಹುದು.
ಹಾಗಾಗಿ ನೀವೇನಾದರೂ ಕೆನರಾ ಬ್ಯಾಂಕ್ ನಲ್ಲಿ ಅಕೌಂಟ್ ಅನ್ನು ಹೊಂದಿದ್ದರೆ ಮತ್ತು ನಿಮ್ಮ ಮನೆಯಲ್ಲಿ ಹಿರಿಯ ನಾಗರಿಕರ ಏನಾದರೂ ಇದ್ದರೆ ಅವರ ಹೆಸರಲ್ಲಿ ಠೇವಣಿ ಇಟ್ಟು ಈ ಒಂದು ಲಾಭವನ್ನು ಪಡೆದುಕೊಳ್ಳಬಹುದು ಧನ್ಯವಾದಗಳು.