ಕರ್ನಾಟಕ ಅಣೆಕಟ್ಟು ನೀರಿನ ಮಟ್ಟ: ಆಲಮಟ್ಟಿ ಅಣೆಕಟ್ಟಿನ ಒಳಹರಿವಿನಲ್ಲಿ ಹೆಚ್ಚಳ; 14 ಅಣೆಕಟ್ಟುಗಳ ನೀರಿನ ಮಟ್ಟ ಎಷ್ಟು? ಇಲ್ಲಿದೆ ವಿವರ
ಬೆಂಗಳೂರು, ಜುಲೈ 30: ಕರ್ನಾಟಕದ ಮಲೆನಾಡಿನ ಹಾಗೂ ಕರಾವಳಿ ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ರಾಜ್ಯದ ಬಹುತೇಕ ಜಲಾಶಯಗಳು ಭರ್ತಿಯಾಗಿವೆ. ಮಳೆಯಿಂದಾಗಿ ಜಲಾಶಯಗಳ ಒಳಹರಿವು ನಿರಂತರವಾಗಿ ಹೆಚ್ಚುತ್ತಿದೆ.
ಮಂಗಳವಾರವೂ ಕರ್ನಾಟಕದ ಕರಾವಳಿ ಮತ್ತು ಗುಡ್ಡಗಾಡು ಪ್ರದೇಶಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ. ಮಲೆನಾಡಿನ ಶಿವಮೊಗ್ಗ ಮತ್ತು ಚಿಕ್ಕಮಗಳೂರು, ಉತ್ತರ ಕನ್ನಡ ಜಿಲ್ಲೆಯ ಕರಾವಳಿ ಮತ್ತು ಮಲೆನಾಡಿನಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಇನ್ನು, ಮಹಾರಾಷ್ಟ್ರ ಹಾಗೂ ಬೆಳಗಾವಿಯ ಕೃಷ್ಣಾ ಅಚ್ಚುಕಟ್ಟು ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಆಲಮಟ್ಟ ಜಲಾಶಯಕ್ಕೆ ಒಳಹರಿವಿನ ಪ್ರಮಾಣ ಹೆಚ್ಚುತ್ತಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಒಳಹರಿವು ಮೀರಿದ ನೀರನ್ನು ನದಿಗೆ ಬಿಡಲಾಗುತ್ತಿದೆ. ಆಲಮಟ್ಟಿ ಜಲಾಶಯದ ಎತ್ತರ 519.60 ಮೀಟರ್ ಹಾಗೂ ನೀರಿನ ಸಂಗ್ರಹ ಸಾಮರ್ಥ್ಯ 123.081 ಟಿಎಂಸಿ ಆಗಿದೆ, ಮಂಗಳವಾರ 67.86 ನೀರು ಸಂಗ್ರಹವಾಗಿದೆ. 3 ಲಕ್ಷ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. 2 ಲಕ್ಷ ಕ್ಯೂಸೆಕ್ ಒಳಹರಿವು ಇದೆ.
ರಾಜ್ಯದ ಪ್ರಮುಖ ಜಲಾಶಯಗಳಾದ ಫೈಕಿ ತುಂಗಭದ್ರಾ, ಕೆಆರ್ ಎಸ್, ಹಾರಂಗಿ, ಘಟಪ್ರಭಾ, ಉತ್ತರ ಕರ್ನಾಟಕದ ಆಲಮಟ್ಟಿ, ನಾರಾಯಣಪುರ ಜಲಾಶಯಗಳು ಬಹುತೇಕ ಭರ್ತಿಯಾಗಿವೆ. ಹಾಗಾದರೆ ಇಂದು (ಜುಲೈ 30) ಭದ್ರಾ ಜಲಾಶಯ ಸೇರಿದಂತೆ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಎಷ್ಟಿದೆ? ಜಲಾಶಯಕ್ಕೆ ಒಳಹರಿವು ಎಷ್ಟು? ಹೊರ ಹರಿವು ಎಷ್ಟು ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.
ಪ್ರಮುಖ ಜಲಾಶಯಗಳು ಒಟ್ಟು ಸಾಮರ್ಥ್ಯ (ಟಿಎಂಸಿ) ಪ್ರಸ್ತುತ ಮಟ್ಟ (ಟಿಎಂಸಿ) ಒಳಹರಿವು (ಕ್ಯೂಸೆಕ್ಸ್) ಆಲಮಟ್ಟಿ ಜಲಾಶಯ 123.0867.862,71,385
ತುಂಗಭದ್ರಾ ಜಲಾಶಯ 105.7997.411,47,122
ಮಲಪ್ರಭಾ ಜಲಾಶಯ ಎಸ್.2.437.437.71 47.4557,012 ಲಿಂಗನಮಕ್ಕಿ ಜಲಾಶಯ 151.75120.5240, 382
ಕಬಿನಿ ಜಲಾಶಯ19.5219.0020,346
ಭದ್ರಾ ಜಲಾಶಯ71.5466.3818,381
ಘಟಪ್ರಭಾ ಜಲಾಶಯ51.0046.9647,420
ಹೇಮಾವತಿ ಜಲಾಶಯ37.1035.2932.6226 ಜಲಾಶಯ 8.507.437,613
ಸೂಫಾ 145.3396.9725,995 ನಾರಾಯಣಪುರ33.3124.013,01,771
ವಾಣಿವಿಲಾಸ ಸಾಗರ30 .4217.94974