K.R. ನೇತ್ರಾವತಿ ಮನೆಯ ಮೇಲೆ ಲೋಕಾಯುಕ್ತ ದಾಳಿ ನಡೆದಿದ್ದು, ₹5 ಲಕ್ಷ ನಗದು ಹಣ, 900 ಗ್ರಾಂ ಚಿನ್ನ ಹಾಗು ಬೆಳ್ಳಿ ಆಭರಣಗಳು ದೊರೆತಿವೆ.
ವಾಣಿಜ್ಯ ತೆರಿಗೆ ಅಧಿಕಾರಿ K.R. ನೇತ್ರಾವತಿ ರವರ ಮನೆ ಮತ್ತು ಲೋಕಾಯುಕ್ತ ದಾಳಿ ವೇಳೆಗೆ ಪತ್ತೆಯಾದ ನಗದು ಮತ್ತು ಆಭರಣಗಳು ಚಿತ್ರದಲ್ಲಿ ಗಮನಿಸಿ.
ಚಿಕ್ಕಮಗಳೂರು: ತರೀಕೆರೆಯ ವಾಣಿಜ್ಯ ತೆರಿಗೆ ಅಧಿಕಾರಿ K.R . ನೇತ್ರಾವತಿ ಅವರ ಮನೆಯ ಮೇಲೆ ಲೋಕಾಯುಕ್ತರ ದಾಳಿ ನಡೆದಿದ್ದು, ₹5 ಲಕ್ಷ ರೂಪಾಯಿ ನಗದು, ಮತ್ತು 900 ಗ್ರಾಂ ಚಿನ್ನ ಮತ್ತು ಬೆಳ್ಳಿಯ ಆಭರಣಗಳು ದೊರೆತಿವೆ.
ಆದಾಯಕ್ಕೂ ಮಿತಿ ಮೀರಿ ಆಸ್ತಿ ಸಂಪಾದಿಸಿರುವ ಮಾಹಿತಿಯ ಮೇರೆಗೆ ಪಟ್ಟಣದ ಪ್ಲಾಂಟರ್ಸ್ ಪಾರ್ಕ್ ಲೇಔಟ್ (Planters Park Layout) ನಲ್ಲಿರುವ ಇವರ ಮನೆ ಮತ್ತು T.B.ಕಾಂತರಾಜು ರಸ್ತೆಯಲ್ಲಿ ಇರುವ
ಕಛೇರಿಯ ಮೇಲೆ ದಾಳಿ ನಡೆದಿದ್ದು ತನಿಖೆಯು ಮುಂದುವರಿದಿದೆ ಎಂದು ಲೋಕಾಯುಕ್ತ ಪೊಲೀಸ್ ರು ತಿಳಿಸಿದ್ದಾರೆ.