ನಮ್ಮ ಭಾರತ ದೇಶ ಕೃಷಿ ಪ್ರಧಾನ ದೇಶವಾಗಿದೆ ಇಲ್ಲಿ ಸಾಕಷ್ಟು ರೈತರುಗಳು ಕೃಷಿಯನ್ನು ನಂಬಿಕೊಂಡು ಮತ್ತು ಭೂಮಿಯನ್ನು ನಂಬಿಕೊಂಡು ಇರುತ್ತಾರೆ. ಮತ್ತು ಕೆಲವರು ಸಣ್ಣದಾಗಿ ಜಮೀನನ್ನು ಹೊಂದಿರುತ್ತಾರೆ ಇನ್ನು ಕೆಲವರು ವಿಸ್ತೀರ್ಣ ಜಮೀನನ್ನು ಹೊಂದಿರುತ್ತಾರೆ.
ರೈತರು ಇಂತಹ ಜಮೀನಿಗೆ ಹೋಗಲು ಕಾಲುದಾರಿ ಮತ್ತು ಬಂಡಿದಾರಿಯನ್ನು ಮಾಡಿಕೊಂಡು ಇರುತ್ತಾರೆ ಎಷ್ಟೋ ಸಾರಿ ರೈತರು ಮುಂದೆ ಇರುವ ಜಮೀನಿಗೆ ಹೋಗಲು ಅವರಿಗೆ ಕಾಲ್ದಾರಿಯಲ್ಲೂ ಕೂಡ ಇರುವುದಿಲ್ಲ ಮತ್ತು ಅದಕ್ಕಾಗಿ ಬೇರೆ ರೂಟಿನಲ್ಲಿ ಬಂದು ಅವರ ಜಮೀನಿಗೆ ಪ್ರವೇಶ ಮಾಡಬೇಕಾಗುತ್ತದೆ ಇಂತಹ ಸಂದರ್ಭದಲ್ಲಿ ಇನ್ನೂ ಕೆಲವು ರೈತರಿಗೆ ಜಮೀನಿಗೆ ಪ್ರವೇಶ ಮಾಡಲು ದಾರಿ ಇರುವುದಿಲ್ಲ.
ಎಷ್ಟೋ ಸಾರಿ ಈ ಒಂದು ವಿಷಯಕ್ಕಾಗಿ ತುಂಬಾ ಜಗಳಗಳು ನಡೆಯುತ್ತವೆ ಮತ್ತು ಕೋರ್ಟ್ ಕೇಸ್ಗಳು ಕೂಡ ಆಗುತ್ತದೆ ಕೆಲವರು ಖಾಸಗಿ ಜಮೀನನ್ನು ಹೊಂದಿದ್ದು ಬೇರೆ ರೈತರು ಸುಲಭವಾಗಿ ಅವರ ಜಮೀನಿಗೆ ಹೋಗಲು ದಾರಿಯನ್ನು ಕೊಡುವುದಿಲ್ಲ.
ಇಷ್ಟೇ ಇಲ್ಲದೆ ತಲತಲಾಂತರ ವರ್ಷಗಳಿಂದ ಅಲ್ಲಿರುವ ದಾರಿಯನ್ನು ಮುಚ್ಚಿ ಬೆಳೆಯನ್ನು ತೆಗೆಯಲು ಬೇರೆ ರೈತರಿಗೆ ದಾರಿಯನ್ನು ಕೊಡುವುದಿಲ್ಲ ಮತ್ತು ತೊಂದರೆಯನ್ನು ಮಾಡುತ್ತಾರೆ ಇಂತಹ ಸಂದರ್ಭದಲ್ಲಿ ರೈತರು ಅವರ ಜಮೀನಿಗೆ ಹೇಗೆ ಹೋಗಬೇಕು? ಆಗು ಇದಕ್ಕೆ ಒಂದು ಕಾನೂನು ಕೂಡ ಇದೆ.
ಸರ್ಕಾರ ರೈತರಿಗೋಸ್ಕರ ಅವರು ತಮ್ಮ ಜಮೀನಿಗೆ ಹೋಗಬೇಕೆಂದು ದಾರಿಗೆ ಸಂಬಂಧಪಟ್ಟಂತೆ ಒಂದು ಆಕ್ಟ್ ಗಳನ್ನು ಜಾರಿಗೆ ತರಲಾಗಿದೆ. ಈ ಒಂದು ಆಕ್ಟ್ಸ್ ಪ್ರಕಾರ ಬೇರೆ ಬೇರೆ ಸಂದರ್ಭದಲ್ಲಿ ಈ ಒಂದು ರೈಟ್ ಅನ್ನು ರೈತರಿಗೆ ನೀಡಲಾಗಿದೆ.
ಈಸೆಮೆಂಟ್ಸ್ ಒಫ್ ನೆಸಸ್ಸಿಟಿ :
ಈ ಒಂದು ಕಾಯ್ದೆಯ ಪ್ರಕಾರ ಮುಂದೆ ಇರುವ ಜಮೀನಿನ ರೈತ ಹಿಂದೆ ಇರುವ ರೈತನ ಜಮೀನಿಗೆ ದಾರಿಯನ್ನು ಬಿಟ್ಟು ಕೊಡಬೇಕು ಇಲ್ಲವಾದರೆ ಆ ವ್ಯಕ್ತಿಯ ಮೇಲೆ ದೂರನ್ನು ಸಲ್ಲಿಸಬಹುದು.
ಈಸೆಮೆಂಟ್ಸ್ ಒಫ್ ಪ್ರೆಸ್ಕಿರಿಪ್ಶನ್ :
15 ರಿಂದ 20 ವರ್ಷಗಳಿಂದಲೂ ಹಳೆಯದಾದ ದಾರಿಯನ್ನು ಏನಾದರೂ ಮುಚ್ಚಿದರೆ ಮತ್ತು ಆ ಒಂದು ಜಾಗದಲ್ಲಿ ಕೃಷಿ ಭೂಮಿಯನ್ನಾಗಿ ಏನಾದರೂ ಮಾಡಿದರೆ ಅಂತಹ ವ್ಯಕ್ತಿಯ ಮೇಲೆ ಈ ಒಂದು ಆಕ್ಟ್ ಅಡಿಯಲ್ಲಿ ದೂರನ್ನು ಸಲ್ಲಿಸಬಹುದು.
ಈಸೆಮೆಂಟ್ಸ್ ಒಫ್ ಕಸ್ಟಮರ್ :
ತಲಾತಲಾಂತರ ವರ್ಷಗಳಿಂದ ಬಿಟ್ಟಿರೋ ಆ ಒಂದು ಜಾಗವನ್ನು ವಶಪಡಿಸಿಕೊಳ್ಳುವಂತಿಲ್ಲ ಮತ್ತು ಆ ಒಂದು ಜಾಗವನ್ನು ಏನಾದರೂ ಅವರು ಹೊಸ ಪಡಿಸಿಕೊಳ್ಳಲು ಟ್ರೈ ಮಾಡಿದರೆ ಅಂಥವರ ಮೇಲೆ ಈ ಒಂದು ಅಡಿಯಲ್ಲಿ ಆ ವ್ಯಕ್ತಿಯ ಮೇಲೆ ದೂರನ್ನು ಸಲ್ಲಿಸಬಹುದು.
ಈ ರೀತಿ ಏನಾದರೂ ತಮ್ಮ ಜಮೀನಿಗೆ ಹೋಗಲು ತೊಂದರೆಯಾಗುತ್ತಿದ್ದರೆ ಅಂತಹ ರೈತರುಗಳು ಕಾನೂನಾತ್ಮಕವಾಗಿ ಹೋರಾಡಿ ಜಾಗವನ್ನು ಪಡೆದುಕೊಳ್ಳಬಹುದು. ಮತ್ತು ನಿಮ್ಮ ಅಕ್ಕಪಕ್ಕದ ರೈತರುಗಳಿಗೆ ತೊಂದರೆ ಆಗುತ್ತಿದ್ದರೆ ಈ ಒಂದು ಮಾಹಿತಿ ಇನ್ನು ಅವರಿಗೆ ಶೇರ್ ಮಾಡಿ ಧನ್ಯವಾದಗಳು.