: ಭದ್ರಾ ಜಲಾಶಯದ ಮಲೆನಾಡಿನ ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮತ್ತೆ ಧಾರಾಕಾರ ಮಳೆ ಮುಂದುವರಿದಿದೆ. ಇದರಿಂದಾಗಿ ಒಳಹರಿವು ಮತ್ತೆ ಹೆಚ್ಚಿದೆ. ಇಂದು (ಜೂ.30) 20,774 ಕ್ಯೂಸೆಕ್ ಒಳಹರಿವು ಇದ್ದು, ನಿನ್ನೆ (ಜೂ.29) 18381 ಕ್ಯೂಸೆಕ್ ಇತ್ತು. ನಿನ್ನೆಗೆ ಹೋಲಿಸಿದರೆ ಒಳ ಹರಿವು 3 ಸಾವಿರ ಕ್ಯೂಸೆಕ್ ಕಡಿಮೆಯಾಗಿದೆ. ಆದರೆ, ಕಳೆದ 14 ದಿನಗಳಲ್ಲಿ 42 ಅಡಿಗಳಷ್ಟು ನೀರು ಹೆಚ್ಚಾಗಿದೆ. ಜೂನ್ 15 ರಂದು 141 ಅಡಿ ಇದ್ದ ನೀರು ಇಂದು 183.2 ಅಡಿಗೆ ಏರಿಕೆಯಾಗಿದೆ. ನಿನ್ನೆ ರಾತ್ರಿಯಿಂದ ಡಾಂಗೆ ಎಡ ಮತ್ತು ಕಾಲುವೆಗೆ ನೀರು ಹರಿಸಲಾಗುತ್ತಿದೆ. ಮುಂಗಾರು ಹಂಗಾಮಿನಲ್ಲಿ 120 ದಿನ ನೀರು ಹರಿಸಲು ತೀರ್ಮಾನ ಕೈಗೊಳ್ಳಲಾಗಿದೆ. ಅಣೆಕಟ್ಟೆಯಿಂದ 1,954 ಕ್ಯೂಸೆಕ್ ನೀರು ಹೊರಹರಿವು ಇದೆ.
ಅಣೆಕಟ್ಟು ಬರ್ತಿಗಳು ಇನ್ನೂ 2.8 ಅಡಿ ಇದೆ ಹಾಗಾಗಿ ಯಾವ ಕ್ಷಣದಲ್ಲಾದರೂ ಬರ್ತಿಯಾಗಬಹುದು. ಕಳೆದ ವರ್ಷ ಇದೇ ದಿನ 8394 ಕ್ಯೂಸೆಕ್ ಒಳಹರಿವು ಇತ್ತು. 161’6 ಅಡಿ ನೀರು ಮಾತ್ರ ಸಂಗ್ರಹವಾಗಿದೆ. ಅಚ್ಚುಕಟ್ಟು ಭಾಗದ ಚಿತ್ರದುರ್ಗ ಭಾಗದ ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ರೈತರು ಭದ್ರಾ ಅಣೆಕಟ್ಟಿನ ಒಳಹರಿವು ಹೆಚ್ಚಳದಿಂದ ಸಂತಸಗೊಂಡಿದ್ದಾರೆ. ಅದರಲ್ಲೂ ಭದ್ರಾವತಿ, ಹೊನ್ನಾಳಿ, ಹರಿಹರ, ದಾವಣಗೆರೆ ಭಾಗದ ಭತ್ತ ಬೆಳೆಗಾರರಲ್ಲಿ ಕೊನೆ ಗಳಿಗೆಯಲ್ಲಿ ಭತ್ತ ನಾಟಿ ಮಾಡುವ ಆಶಾಭಾವನೆ ಮೂಡಿದೆ. ಜಿಲ್ಲೆಯಲ್ಲಿ ತುಂಗಭದ್ರಾ ನದಿಯೂ ಉಕ್ಕಿ ಹರಿಯುತ್ತಿದೆ. ಜಿಲ್ಲೆಯ ಹೊನ್ನಾಳಿ, ಹರಿಹರ ಭಾಗದಲ್ಲಿ ತುಂಗಭದ್ರಾ ನದಿ ಹಾದು ಹೋಗುತ್ತಿದ್ದು, ಈ ಭಾಗದಲ್ಲಿ ಭತ್ತದ ನಾಟಿಗೆ ಸಿದ್ಧತೆ ನಡೆದಿದೆ.
ಭದ್ರಾ ಅಚ್ಚುಕಟ್ಟು ಪ್ರದೇಶದ ವ್ಯಾಪ್ತಿಯಲ್ಲಿ ಬರುವ ದಾವಣಗೆರೆ ಜಿಲ್ಲೆಯಲ್ಲಿ 65,847 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬೆಳೆಯಲಾಗುತ್ತದೆ. ಇದೀಗ ಭದ್ರಾ ಜಲಾಶಯದ ನೀರಿನ ಮಟ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ನಾಲೆಗೆ ನೀರು ಹರಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ರೈತರು, ಭತ್ತದ ಸಸಿಗಳನ್ನು ತಯಾರಿಸುವ ಕಾರ್ಯ ಭರದಿಂದ ಸಾಗಿದೆ. ಬೋರ್ ವೆಲ್ ಇರುವವರು ಈಗಾಗಲೇ ಭತ್ತ ನಾಟಿಗೆ ಸಿದ್ಧತೆಯಲ್ಲಿ ತೊಡಗಿದ್ದಾರೆ. ಭದ್ರಾ ನಾಲೆಯ ನೀರನ್ನೇ ಅವಲಂಬಿಸಿರುವವರು ಬೋರ್ ನೀರನ್ನೇ ಆಶ್ರಯಿಸುತ್ತಿದ್ದಾರೆ. ಭದ್ರಾ ಅಣೆಕಟ್ಟು ಭರ್ತಿಯಾಗುವ ಸಾಧ್ಯತೆ ಹೆಚ್ಚಿದೆ. ಮುಂಗಾರು ಭತ್ತದ ಬೆಳೆಗೆ ನೀರು ಬಿಡುವ ಕುರಿತು ಇಂದು ಕಾಡಾ ಸಭೆ ನಡೆಯಲಿದೆ.
ಕಳೆದ ವರ್ಷ ಭೀಕರ ಬರಗಾಲದ ಕಾರಣ ಅಲ್ಪಸ್ವಲ್ಪ ನೀರು ಸಂಗ್ರಹವಾಗಿತ್ತು. ಈ ಬಾರಿ ಮುಂಗಾರು ಪೂರ್ವ ಮಳೆ ಹಾಗೂ ಮುಂಗಾರು ಮಳೆ ಭದ್ರಾ ಜಲಾಶಯ ವ್ಯಾಪ್ತಿಯಲ್ಲಿ ಉತ್ತಮ ಆರಂಭ ಪಡೆದಿದ್ದು, ನಂತರದ 20 ದಿನ ಸಂಪೂರ್ಣ ಕಡಿಮೆಯಾಗಿದೆ. ಕಳೆದ 29 ದಿನಗಳಿಂದ ಧಾರಾಕಾರ ಮಳೆಯಾಗುತ್ತಿದೆ. ಇದೇ ರೀತಿ ಮಳೆಯಾದರೆ ಈ ತಿಂಗಳಲ್ಲೇ ಅಣೆಕಟ್ಟು ಭರ್ತಿಯಾಗಲಿದೆ.
ತರೀಕೇರಿ ಮತ್ತು ಭದ್ರಾವತಿ ಗಡಿಭಾಗದ ಲಕ್ಕವಳ್ಳಿಯಲ್ಲಿರುವ ಭದ್ರಾ ಜಲಾಶಯದ ಒಟ್ಟು ನೀರಿನ ಸಾಮರ್ಥ್ಯ 71.54 ಟಿಎಂಸಿ ಹಾಗೂ ಗರಿಷ್ಠ 186 ಅಡಿ. ಇಂದಿನ (ಜೂ.30) ನೀರಿನ ಮಟ್ಟ 183.2 ಅಡಿ. ಒಳಹರಿವು 20,774 ಕ್ಯೂಸೆಕ್ ಇದೆ