ಸಾಮಾನ್ಯವಾಗಿ ಎಲ್ಲರಿಗೂ ಹೂಡಿಕೆ ಮಾಡಬೇಕೆಂಬ ವಿಚಾರದಲ್ಲಿ ತುಂಬಾನೇ ಆಸಕ್ತಿ ಇರುತ್ತದೆ ಆದರೆ ಎಲ್ಲಿ ಹೂಡಿಕೆ ಮಾಡಬೇಕು ಎಂದು ಸರಿಯಾದ ಕ್ರಮ ತಿಳಿದಿರುವುದಿಲ್ಲ ಹಾಗೂ ಸಾಮಾನ್ಯವಾಗಿ ಕೆಲವರು ಬ್ಯಾಂಕಿನಲ್ಲಿ ಫಿಕ್ಸಿಡ್ ಡೆಪಾಸಿಟ್ ಇಡುತ್ತಾರೆ ಇನ್ನು ಕೆಲವರು ಡಿಜಿಟಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದರ ಮೂಲಕ ಹೆಚ್ಚಿನ ಆದಾಯವನ್ನು ಗಳಿಸುವ ಯೋಜನೆಯನ್ನು ಹಾಕಿಕೊಂಡಿರುತ್ತಾರೆ.
ಹಾಗಾದರೆ ಮ್ಯೂಚುಯಲ್ ಫಂಡ್ ನಲ್ಲಿ ಹೆಚ್ಚು ಲಾಭಗಳಿಸಬಹುದಾ ಅಥವಾ ಫಿಕ್ಸೆಡ್ ಡೆಪಾಸಿಟ್ ನಲ್ಲಿ ಹೆಚ್ಚು ಲಾಭಗಳಿಸಬಹುದಾ ಎಂಬುದು ಸಾಮಾನ್ಯವಾಗಿ ಜನರಿಗೆ ಇದು ಗೊಂದಲವಾಗಿರುತ್ತದೆ. ಹಾಗೂ ಇವೆರಡರಲ್ಲಿ ಯಾವುದು ಉತ್ತಮ ಎಂಬುದರ ಬಗ್ಗೆ ಈ ಒಂದು ಲೇಖನದಲ್ಲಿ ಸಂಪೂರ್ಣ ಮಾಹಿತಿ ತಿಳಿಸಲಾಗಿದೆ ಮತ್ತು ಅದನ್ನು ಸಂಪೂರ್ಣವಾಗಿ ಓದಿ ತಿಳಿದುಕೊಳ್ಳಿ.
ಮ್ಯೂಚುವಲ್ ಫಂಡ್ (Mutual Fund):
ಪ್ರತಿ ತಿಂಗಳು 500 ರೂಪಾಯಿಯನ್ನು ಒಬ್ಬ ಮನುಷ್ಯ ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುತ್ತಿದ್ದಾನೆ ಎಂದರೆ ವಾರ್ಷಿಕವಾಗಿ ಅವನಿಗೆ 12ರಷ್ಟು ಶೇಕಡ ಲಾಭ ಸಿಗುತ್ತದೆ. ಈ ಹೂಡಿಕೆಯನ್ನು 20 ವರ್ಷಗಳ ಕಾಲ ಏನಾದರೂ ಮಾಡಿದರೆ 4.99 ಲಕ್ಷದಷ್ಟು ಹಣ ನಿಮ್ಮ ಬಳಿ ಉಳಿತಾಯವಾಗಿ ಉಳಿಯುತ್ತದೆ ಎಂದರ್ಥ. ಇದರಲ್ಲಿ ಒಂದು ವೇಳೆ ಸ್ವಲ್ಪಮಟ್ಟಿಗಾದರೂ ಮೊತ್ತವನ್ನು ಹಣ ಹೂಡಿಕೆ ಮಾಡಿ ನೀವು ಉಳಿತಾಯ ಮಾಡಬಹುದಾಗಿದೆ.
ಇದರ ಜೊತೆಯಲ್ಲಿ ಏನಾದರೂ ವಾರ್ಷಿಕವಾಗಿ ಹತ್ತು ಸಾವಿರ ರೂಪಾಯಿಗಳನ್ನು ಹೂಡಿಕೆ ಮಾಡಿದರೆ ಶೇಕಡ 13ರಷ್ಟು ಬಡ್ಡಿ ಅವನಿಗೆ ದೊರೆತಾಗ ಬರೋಬ್ಬರಿ ಆ ಒಂದು ಮೊತ್ತ ಒಂದು ಕೋಟಿ 14 ಲಕ್ಷ 55,000 ರೂಪಾಯಿಗಳ ಮೊತ್ತವನ್ನು 20 ವರ್ಷಕ್ಕೆ ಪಡೆದುಕೊಳ್ಳಬಹುದಾಗಿದೆ.
ಫಿಕ್ಸೆಡ್ ಡೆಪಾಸಿಟ್ (FD):
ಸಾಮಾನ್ಯವಾಗಿ ಎಲ್ಲರಿಗೂ ಕೂಡ ಹೂಡಿಕೆ ಮಾಡುವ ವಿಧಾನ ತಿಳಿದಿರುವುದು ಫಿಕ್ಸೆಡ್ ಡಿಪೋಸಿಟ್ ಏಕೆಂದರೆ ಇದರಲ್ಲಿ ತುಂಬಾ ಸುರಕ್ಷಿತವಾಗಿ ಹಣ ಇರುತ್ತದೆ ಎಂದು ಜನರು ಭಾವಿಸುತ್ತಾರೆ ಹಾಗೂ ಇನ್ನೂ ಕೆಲ ಜನಗಳು ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದಕ್ಕಾಗಿ ಇಂದೇಟಾಕುತ್ತಾರೆ.
“FD & Mutual Fund ಈ ಎರಡರಿಂದ ಸಿಗುವ ಲಾಭಾಂಶಕ್ಕೆ ಒಂದು ಉದಾಹರಣೆ ಏನೆಂದು ನೋಡಬಹುದಾದರೆ”
ಉದಾಹರಣೆ FD:
ಒಬ್ಬ ಮನುಷ್ಯ ಫಿಕ್ಸ್ಡ್ ಡೆಪಾಸಿಟ್ ನಲ್ಲಿ ಹಣವನ್ನು ಹೂಡಿಕೆ ಮಾಡುತ್ತಾನೆ ಅದರಲ್ಲಿ 6 ರಷ್ಟು ಬಡ್ಡಿ ಮೊತ್ತದಲ್ಲಿ 10 ವರ್ಷದವರೆಗೆ ಹೂಡಿಕೆ ಮಾಡುತ್ತಾನೆ ಇದರಲ್ಲಿ 10 ವರ್ಷದ ನಂತರ ಅವನಿಗೆ ಸಿಗುವ ಮೊತ್ತ 1.8 ಲಕ್ಷಗಳಷ್ಟು ಆಗಿರುತ್ತದೆ. ಇದು ಅವನಿಗೆ FD ಇಂದ ಸಿಗುವ ಹಣವಾಗಿದೆ.
ಉದಾಹರಣೆ Mutual Fund:
ಅದೇ ಮನುಷ್ಯ 10 ವರ್ಷದ ಅವಧಿಗೆ ಒಂದು ಲಕ್ಷ ಹಣವನ್ನು ಬಡ್ಡಿಯ ಮೊತ್ತದಲ್ಲಿ ಹೂಡಿಕೆ ಮಾಡುತ್ತಾನೆ ಆಗ ಅವನಿಗೆ 4.04 ಲಕ್ಷದಷ್ಟು ಅವನಿಗೆ ಹತ್ತು ವರ್ಷದ ನಂತರ ಮ್ಯೂಚುವಲ್ ಫಂಡ್ ನಲ್ಲಿ ಹಣ ಸಿಗುತ್ತದೆ.
ಎರಡರಲ್ಲೂ ಗಮನಿಸಬೇಕಾದ ಅಂಶವೇನೆಂದರೆ ಬ್ಯಾಂಕಿನಲ್ಲಿ ಆತ ಆಧಾರದ ಮೇಲೆ ಹೂಡಿಕೆಯನ್ನು ಫಿಕ್ಸೆಡ್ಡೆ ಪಾಸಿಟ್ ನಲ್ಲಿ ಮಾಡಬೇಕಾಗುತ್ತದೆ. ಹಾಗೂ ಆತ ಮಾರುಕಟ್ಟೆಯಲ್ಲಿ ಸಿಗುವಂತಹ ಬಡ್ಡಿಯ ಆಧಾರದ ಮೇಲೆ ಮ್ಯೂಚುಯಲ್ ಫಂಡ್ನಲ್ಲಿ ಹೂಡಿಕೆ ಮಾಡಬೇಕಾಗುತ್ತದೆ.
ಮತ್ತೊಂದು ಗಮನಿಸಬೇಕಾದ ಅಂಶವೆಂದರೆ ಫಿಕ್ಸೆಡ್ನ ಡೆಪಾಸಿಟ್ ನಲ್ಲಿ ಗ್ಯಾರಂಟಿ ಆದಂತಹ ರಿಟರ್ನ್ ನಿಮಗೆ ಸಿಗುತ್ತದೆ. ಆದರೆ ಮ್ಯೂಚುಯಲ್ ಫಂಡ್ ನಲ್ಲಿ ಸ್ವಲ್ಪ ರಿಸ್ಕ್ ಇದ್ದೇ ಇರುತ್ತದೆ. ಆದರೆ ಈಗಿನ ಕಾಲದಲ್ಲಿ ಸಾಕಷ್ಟು ಜನರು ಮ್ಯೂಚುಯಲ್ ಫಂಡ್ ನಲ್ಲಿ ಹೂಡಿಕೆ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ ಅಲ್ಲದೆ ಉತ್ತಮವಾದಂತಹ ಹೂಡಿಕೆ ಎಂದು ಸ್ವಲ್ಪ ಜನರು ಕೂಡ ಹೇಳುತ್ತಿದ್ದಾರೆ ಮತ್ತು ಹೂಡಿಕೆ ಮಾಡುವುದಕ್ಕೆ ಇದು ಒಳ್ಳೆಯ ಪ್ಲಾಟ್ಫಾರ್ಮ್ ಎಂದು ಹೇಳಲು ತಪ್ಪಾಗಲಾರದು.
ನಿಮ್ಮ ಅಕ್ಕಪಕ್ಕದ ಜನರು ಅಥವಾ ನಿಮ್ಮ ಸ್ನೇಹಿತರು ಏನಾದರೂ ಮ್ಯೂಚುಯಲ್ ಫಂಡ್ ಅಥವಾ ಫಿಕ್ಸೆಡ್ ಡೆಪಾಸಿಟ್ ಅಲ್ಲಿ ಹೂಡಿಕೆ ಮಾಡಬೇಕೆಂಬ ಗೊಂದಲದಲ್ಲಿದ್ದರೆ ಅಂತವರಿಗೆ ಈ ಒಂದು ಇನ್ಫಾರ್ಮಶನ್ ಅನ್ನು ಶೇರ್ ಮಾಡಿ ಅವರಿಗೆ ಈ ಒಂದು ಇಂಫಾರ್ಮೇಷನ್ ಇಂದ ತುಂಬಾ ಉಪಯುಕ್ತವಾಗುತ್ತದೆ ಫಿಕ್ಸ್ಡ್ ಡೆಪಾಸಿಟ್ ನಲ್ಲಿ ಗ್ಯಾರಂಟಿ ರಿಟರ್ನ್ ನಿಮಗೆ ಸಿಗುತ್ತದೆ. ಮ್ಯೂಚುವಲ್ ಫಂಡ್ ನಲ್ಲಿ ನೀವು ಸ್ವಲ್ಪ ರಿಸ್ಕ್ ತೆಗೆದುಕೊಳ್ಳಬೇಕಾಗುತ್ತದೆ.
ಈ ಒಂದು ಲೇಖನವನ್ನು ಅವರಿಗೆ ಶೇರ್ ಮಾಡಿ ಅವರಿಗೆ ಸೂಕ್ತವೆನಿಸುವ ಆಯ್ಕೆಯನ್ನು ಮಾಡಿಕೊಂಡು ಅವರು ಹೂಡಿಕೆಯನ್ನು ಪ್ರಾರಂಭಿಸಲಿ ಧನ್ಯವಾದಗಳು.