ಬೇಕಿಲ್ಲ ಯಾವುದೇ ಅಡಮಾನ, ಸಿಗುತ್ತೆ ಹತ್ತು ಲಕ್ಷ ರೂಪಾಯಿ ಸಾಲ ಈ ಯೋಜನೆ ಅಡಿಯಲ್ಲಿ!

Loan Scheme : ನಮ್ಮ ದೇಶದಲ್ಲಿ ಸ್ವಂತ ಉದ್ಯೋಗ ಮಾಡುವವರಿಗೆ ಸಾಕಷ್ಟು ಅವಕಾಶಗಳು ಇದೆ ಖಾಸಗಿ ಕಂಪನಿ ಹಾಗೂ ಬೇರೆ ಬೇರೆ ಉದ್ಯೋಗದಲ್ಲಿ ಕೆಲಸ ಮಾಡುವಂಥವರಿಗೆ ಸ್ವಂತ ಉದ್ಯೋಗ ಮಾಡಿ ಅದರಲ್ಲಿ ಹೆಚ್ಚು ಹಣವನ್ನು ಗಳಿಸಬಹುದೆಂದು ಈಗಿನ ಕಾಲದ ಯುವಕರು ಸ್ವಂತ ಉದ್ಯೋಗ ಮಾಡಲು ಮುಂದಾಗುತ್ತಾರೆ.

WhatsApp Group Join Now
Telegram Group Join Now

ಸ್ವಂತ ಉದ್ಯೋಗವನ್ನು ಪ್ರಾರಂಭಿಸುವವರಿಗೆ ಕೇಂದ್ರ ಸರ್ಕಾರ ಅತ್ಯುತ್ತಮ ಯೋಜನೆಯನ್ನು ಜಾರಿಗೆ ತಂದಿದೆ. ಈ ಒಂದು ಯೋಜನೆಯ ಅಡಿಯಲ್ಲಿ ಐವತ್ತು ಸಾವಿರದಿಂದ ಹತ್ತು ಲಕ್ಷದವರೆಗೆ ನೀವು ಸಾಲದ ಸೌಭಾಗ್ಯವನ್ನು ಪಡೆದುಕೊಳ್ಳಬಹುದು.

ಪ್ರಧಾನ ಮಂತ್ರಿ ಮುದ್ರಾ ಯೋಜನೆ :
ಇಲ್ಲಿಯವರೆಗೂ ಕೆಲವರು ಪ್ರಧಾನ ಮಂತ್ರಿ ಮುದ್ರಾ ಯೋಜನೆಯ ಅಡಿಯಲ್ಲಿ ಸಾಲವನ್ನು ಪಡೆದು ಸ್ವಂತ ಉದ್ಯೋಗವನ್ನು ಪ್ರಾರಂಭಿಸಿದ್ದಾರೆ. ಅದರಲ್ಲೂ ವಿಶೇಷವಾಗಿ ಮಹಿಳೆಯರು ಈ ಒಂದು ಪ್ರಧಾನಮಂತ್ರಿ ಮುದ್ರಾ ಯೋಜನೆಯ ಹೆಚ್ಚಾಗಿ ಪಡೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಈ ಒಂದು ಯೋಜನೆಯಲ್ಲಿ ನೀವು 3 ಪ್ರಕಾರಗಳನ್ನು ನೀವು ನೋಡಬಹುದಾಗಿದೆ.

1) ಶಿಶು ಸಾಲ ₹50,000ಗಳವರೆಗೆ ನೀಡುತ್ತದೆ.
2) ಕಿಶೋರ ಸಾಲ ₹50,000 ರಿಂದ 5 ಲಕ್ಷದವರೆಗೆ ಸಾಲ ನೀಡುತ್ತದೆ.
3) ತರುಣ ಸಾಲ 10 ಲಕ್ಷದವರೆಗೆ ಸಾಲ ನೀಡುತ್ತದೆ.

ಹಾಗೂ ಈ ಒಂದು ಪ್ರಧಾನಮಂತ್ರಿ ಮುದ್ರಣ ಯೋಜನೆ ಅಡಿಯಲ್ಲಿ 24 ವರ್ಷಗಳಿಂದ 70 ವರ್ಷ ವಯಸ್ಸಿನವರೆಗೂ ನೀವು ಸಾಲವನ್ನು ಪಡೆಯಬಹುದಾಗಿದೆ.

ಸಾಲ ಪಡೆಯಲು ಬೇಕಾಗಿರುವ ದಾಖಲಾತಿಗಳು :
1. ಉದ್ಯೋಗದ ಬಗ್ಗೆ ಮಾಹಿತಿ
2. ಬ್ಯಾಂಕ್ ಖಾತೆಯ ಬಗ್ಗೆ ಮಾಹಿತಿ
3. ಆದಾಯ ತೆರಿಗೆ ಪಾವತಿ ವಿವರ
4. ಆಧಾರ್ ಕಾರ್ಡ್
5. ಪಾನ್ ಕಾರ್ಡ್

ಪ್ರಧಾನ ಮಂತ್ರಿ ಮುದ್ರಾ ಯೋಜನೆ ಸಾಲ ಪಡೆಯುವುದು ಹೇಗೆ?
ನೀವು ಮಾಡುತ್ತಿರುವ ಉದ್ಯೋಗದ ಬಗ್ಗೆ ಯಾವುದೇ ತರದ ಬ್ಯಾಂಕ್ಗೆ ಹೋಗಿ ನಿಮ್ಮ ಉದ್ಯೋಗದ ಬಗ್ಗೆ ಮಾಹಿತಿಯನ್ನು ಕೊಡಬೇಕು. ಹಾಗೂ ನಿಮ್ಮ ಎಲ್ಲಾ ದಾಖಲಾತಿಗಳನ್ನು ಪಡೆದುಕೊಂಡು ಬ್ಯಾಂಕ್ ನವರು ಎಲ್ಲವನ್ನು ಪರಿಶೀಲಿಸಿ ತದನಂತರ ಹಣವನ್ನು ಬಿಡುಗಡೆ ಮಾಡುತ್ತಾರೆ.

ನಿಮ್ಮ ಉದ್ಯೋಗಕ್ಕೆ ತಕ್ಕಂತೆ 10 ಲಕ್ಷದವರೆಗೆ ನೀವು ಸಾಲವನ್ನು ಪಡೆಯಬಹುದು. ಹಾಗೂ 25% ನೀವು ಪಾವತಿಸಿದರೆ 75% ನೀವು ಸರ್ಕಾರದಿಂದ ಬಂಡವಾಳ ಹಣವನ್ನು ಪಡೆದುಕೊಳ್ಳಬಹುದು. ಸಣ್ಣ ಮತ್ತು ಸೂಕ್ಷ್ಮ ಕೈಗಾರಿಕೆಗೆ ಪ್ರಾರಂಭಿಸಲು ನೀವು ಮುದ್ರಾ ಯೋಜನೆ ಅಡಿಯಲ್ಲಿ ಅಪ್ಲೈ ಮಾಡಬಹುದು.

ಮುದ್ರಾ ಯೋಜನೆಗೆ ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಲು ಅವಕಾಶವಿದ್ದು https://mudra.org.in/ ಈ ಒಂದು ವೆಬ್ ಸೈಟ್ ಗೆ ಭೇಟಿ ನೀಡಿ ನಿಮ್ಮ ಎಲ್ಲಾ ದಾಖಲಾತಿಗಳನ್ನು ಸರಿಯಾದ ಕ್ರಮದಲ್ಲಿ ಭರ್ತಿ ಮಾಡಿ ನಿಮಗೆ ಸಾಲ ಬಿಡುಗಡೆಯಾಗುತ್ತದೆ.

ಮುದ್ರಾ ಯೋಜನೆ ಅಡಿಯಲ್ಲಿ ನೀವು ಯಾವುದೇ ತರಹದ ಹೆಚ್ಚುವರಿ ಆಡಮಾನ ಇಡಬೇಕಾಗಿಲ್ಲ. ಮತ್ತು ಬೇರೆ ಬೇರೆ ಬ್ಯಾಂಕ್ಗಳಲ್ಲಿ ಬೇರೆ ಬೇರೆ ರೀತಿಯಾಗಿ ಬಡ್ಡಿ ದರ ಇದು. ನೀವು ಒಮ್ಮೆ ಬ್ಯಾಂಕಿಗೆ ಭೇಟಿ ನೀಡಿ ಈ ಮುದ್ರಾ ಯೋಜನೆಯ ಮಾಹಿತಿಯನ್ನು ಪಡೆದುಕೊಳ್ಳುವುದು ಉತ್ತಮ ಧನ್ಯವಾದಗಳು.

WhatsApp Group Join Now
Telegram Group Join Now