SSLC : ಖಾಸಗಿ ಅಭ್ಯರ್ಥಿಗಳಿಗೆ ಇಲ್ಲ ಪ್ರತ್ಯೇಕ ಪ್ರಶ್ನೆಪತ್ರಿಕೆ
ಬೆಂಗಳೂರು: ಖಾಸಗಿ ಆಗಿ ಎಸ್ಎಸ್ಎಲ್ಸಿ (sslc ) ಪರೀಕ್ಷೆ ತೆಗೆದುಕೊಳ್ಳುವ ಎಲ್ಲಾ ವಿದ್ಯಾರ್ಥಿಗಳಿಗೆ ಈ ಬಾರಿ ಪ್ರತ್ಯೇಕ ಪರೀಕ್ಷ ಕೇಂದ್ರಗಳು ಮತ್ತು ಪ್ರತ್ಯೇಕ ಪ್ರಶ್ನೆ ಪತ್ರಿಕೆ ಇರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ 9606 495 259
ಕರ್ನಾಟಕ ಸರ್ಕಾರ ಸತ್ಯ ಸಮರ್ಥ ಸಂಪೂರ್ಣ ಸುದ್ದಿಯನ್ನು ವಾಟ್ಸಾಪ್ ಮತ್ತು ಟೆಲಿಗ್ರಾಂ ಮೂಲಕ ನಿಮಗೆ ತಿಳಿಸಲು ಇಚ್ಛಿಸುತ್ತದೆ ಈಗಲೇ ಜಾಯಿನ್ ಆಗಿ.
ಪರೀಕ್ಷೆಯಲ್ಲಿ ಜರುಗುವ ಅಕ್ರಮ ತಡೆಯಲು ನಕಲು ಪ್ರಕರಣಗಳಿಗೆ ಕಡಿವಾಣ ಸಂಪೂರ್ಣವಾಗಿ ಹಾಕಲು ಮುಂದಾಗಿರುವ ಶಾಲೆ ಪರೀಕ್ಷೆ ಹಾಗೂ ಮೌಲ್ಯ ನಿರ್ಣಯ ಮಂಡಳಿ KSEAB ಇತರ ವಿದ್ಯಾರ್ಥಿಗಳಿಗೆ ಸಿದ್ಧಪಡಿಸಿರುವಂತಹ ಪ್ರಶ್ನೆ ಪತ್ರಿಕೆಗಳನ್ನು ನೀಡಲು ನಿರ್ಧಾರ ಮಾಡಲಾಗಿದೆ.
ಹೊಸದಾಗಿ ಪರೀಕ್ಷೆ ಬರೆಯುವವರು ಪುನರಾವತಿ ಅವರು ಸೇರಿ ಪ್ರತಿವರ್ಷ ಸರಿಸುಮಾರು 40000 ಖಾಸಗಿ ವಿದ್ಯಾರ್ಥಿಗಳು ಎಸ್ ಎಸ್ ಎಲ್ ಸಿ ಪರೀಕ್ಷೆಯನ್ನು ಕರ್ನಾಟಕದಲ್ಲಿ ಬರೆಯಲು ನೋಂದಾಯಿಸುತ್ತಾರೆ. ಪ್ರತಿದಿನ ಶಾಲೆಗಳಿಗೆ ತೆರಳಿ ಎಲ್ಲಾ ವಿದ್ಯಾರ್ಥಿಗಳಂತೆ ಶಿಕ್ಷಣ ಪಡೆಯದ ಇವರಿಗೆ ಒಂದಷ್ಟು ಸುಲಭ ಪ್ರಶ್ನೆಗಳನ್ನು ಕೇಳುವ ಪ್ರತ್ಯೇಕ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲಾಗುತ್ತ ಇತ್ತು. ಅವರುಗಳ ಸಂಖ್ಯೆಗೆ ಅನುಗುಣವಾಗಿ ಪ್ರತ್ಯೇಕ ಪರೀಕ್ಷೆ ಕೇಂದ್ರಗಳನ್ನು ಸಹ ನೀಡುತ್ತಿದ್ದರು ಕಳೆದ ವರ್ಷ 2023ರ ಪರೀಕ್ಷೆಯಲ್ಲಿ ಈ ಖಾಸಗಿ ಅಭ್ಯರ್ಥಿಗಳಿಗೆ ಮೀಸಲಾಗಿದಂತಹ ಪರೀಕ್ಷಾ ಕೇಂದ್ರಗಳಲ್ಲಿ ಹೆಚ್ಚಾಗಿ ನಕಲು ನಡೆದಿದ್ದು. ಆದ್ದರಿಂದ ಎಲ್ಲಾ ವಿದ್ಯಾರ್ಥಿಗಳಿಗೆ ಏಕ ರೀತಿ ವ್ಯವಸ್ಥೆ ಮಾಡಲು ಪರೀಕ್ಷಾ ಮಂಡಳಿ ತೀರ್ಮಾನವನ್ನು ತೆಗೆದುಕೊಂಡಿರುತ್ತದೆ.
ಪ್ರಸ್ತುತ ವರ್ಷದಿಂದ 3ಪರೀಕ್ಷಾ ಪದ್ಧತಿ ಪರಿಚಯಿಸಲಾಗಿದೆ ಆದ್ದರಿಂದ ಪ್ರತ್ಯೇಕ ವ್ಯವಸ್ಥೆ ಅಗತ್ಯ ಇರುವುದಿಲ್ಲ. ಖಾಸಗಿ ವಿದ್ಯಾರ್ಥಿಗಳಿಗೆ 20 marks ಗಳ ಆಂತರಿಕ ಮೌಲ್ಯಮಾಪನ ಇಲ್ಲದಿರುವ ಕಾರಣ ಇತರೆ ವಿದ್ಯಾರ್ಥಿಗಳಿಗೆ 80 ಅಂಕಗಳಿಗೆ ಪರೀಕ್ಷೆ ನಡೆಸಲಾಗುತ್ತದೆ ಹಾಗೂ ಅವರಿಗೆ ನೂರು ಅಂಕಗಳಿಗೆ ಪರೀಕ್ಷೆ ನಡೆಸಲು ಪರಿಗಣಿಸಲಾಗಿದೆ ಎಂದು ಕೆ ಎಸ್ ಇ ಎಬಿ (KSEAB ) ಅಧಿಕಾರಿ ಒಬ್ಬರು ಮಾಹಿತಿಯನ್ನು ನೀಡಿದರು.
ನಿಮ್ಮ ಫ್ರೆಂಡ್ಸ್ ಯಾರಾದರೂ ಎಸ್ ಎಸ್ ಎಲ್ ಸಿ ಓದುತ್ತಿದ್ದರೆ ಈ ಲೇಖನವನ್ನು ಅವರಿಗೆ ಶೇರ್ ಮಾಡಿ ವಿಷಯ ತಿಳಿಸಿ ಧನ್ಯವಾದಗಳು ಕರ್ನಾಟಕ ಸರ್ಕಾರ.