ಕರ್ನಾಟಕ ಸರ್ಕಾರ : ಉಚಿತ ಸ್ಮಾರ್ಟ್‌ಫೋನ್‌ ಸಿಗಲಿದೆ, ಅಂಗನವಾಡಿ ಕಾರ್ಯಕರ್ತೆಯರಿಗೆ,ಸಿಹಿ ಸುದ್ದಿ

ಬೆಂಗಳೂರು, ಫೆಬ್ರವರಿ 09: ರಾಜ್ಯದ 76 ಸಾವಿರ ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಸ್ಮಾರ್ಟ್‌ಫೋನ್ ನೀಡಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.

ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಸಮಗ್ರ ಶಿಶು ಅಭಿವೃದ್ಧಿ ಯೋಜನೆಯಡಿ ಅಂಗನವಾಡಿ ಕಾರ್ಯಕರ್ತೆಯರಿಗೆ ಉಚಿತ ಸ್ಮಾರ್ಟ್ ಫೋನ್ ನೀಡಲು ನಿರ್ಧರಿಸಲಾಗಿದೆ 

ಅಂಗನವಾಡಿ ಮೇಲ್ವಿಚಾರಕರಿಗೆ ಮಹಿಳಾ ಮತ್ತು ಮಕ್ಕಳ ಇಲಾಖೆಯೊಂದಿಗೆ ವಿವಿಧ ಸಮೀಕ್ಷೆಗಳು, ಅರ್ಜಿಗಳ ಸ್ವೀಕಾರ ಮತ್ತು ಇತರ ಭರ್ತಿ ಮಾಡಲು 89.61 ಕೋಟಿ ರೂ.ಗಳನ್ನು ಮಂಜೂರು ಮಾಡಲು ಆದೇಶಿಸಲಾಗಿದೆ. 

75,938 ಸ್ಮಾರ್ಟ್ ಫೋನ್ ಖರೀದಿಸಿ ವಿತರಿಸಲು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ನಿರ್ಧರಿಸಲಾಗಿದೆ.